Tuesday, October 27, 2015

ಬೆಳಿಗ್ಗೆ 4 ರ train

ಬೆಳಿಗ್ಗೆ 4 train  ಬೇಗ ಎಳಲು ಆಗಲೆಂದು ರಾತ್ರೆ 12ಕ್ಕೆ railway stationಲಿ settle  ಆಗಿದ್ದೆ. ರಾತ್ರೆಯ  railway station ಗಡಿಬಿಡಿಯನ್ನು ನೋಡುತ್ತ   ಕಡೆ ಕಡೆ ಸುತ್ತಾಡಿ ಸ್ವಲ್ಪ ಸಮಯ ಕಳೆದು station master ಹತ್ತಿರ sleeper ticket ಬೇಕೆಂದಾಗ ಬೆಳಿಗ್ಗೆಯ ಯಾವ  trainಗು  sleeper ಇರಲ್ಲ ಎಂದರು. ನಮ್ಮುರಿನ train ಗೆsleeper ಇರೊತ್ತೆಯೆಂದಾಗ ಬೆಳ್ಳಿಗೆ ಹೊರಡುವ ಯಾವ train ಗು ಇರಲ್ಲ ಬೆಳ್ಳಿಗೆ ಹೊರಟು ರಾತ್ರೆ ತಲುಪುವುದಕ್ಕೆ ಮಾತ್ರ ಇರೊತ್ತೆಂದು ticket ನೀಡಿದರು.
 ಬೋಗಿಯ ಒಳಗೆ seatಗಳಲ್ಲಿ ಯಾರು ಇಲ್ಲದ ಕಾರಣ ಹೋಗಿ ನಿದ್ರಿಸಲು ಬಿದ್ದು ಕೊಂಡೆ.ದಿನದ ಸುಸ್ತಿಗೆ,ರಾತ್ರೆಯ ತಂಪಾದ ಗಾಳಿಗೆ ಸೊಳ್ಳೆಗಳಿದ್ದ ಬೋಗಿಯೊಳಗು ನಿದ್ರೆಯ ಜೊಂಪು ಹತ್ತಿತ್ತು. ಮುಂಜಾನೆಯ ನಿದ್ರೆಯಲ್ಲಿ ರೈಲು ಹೊರಟಿದ್ದೆ  ಗೊತ್ತಾಗದೆ ,ಯಾರೊ ಬಂದು ಎಬ್ಬಿಸಿದ ಹಾಗಾಗಿ     ನೋಡಲು ಬೋಗಿ ತುಂಬಿ ತುಳುಕುತಿತ್ತು ,ಆಗಲೆ ಸಮಯ 7.30 ಆಸುಪಾಸಾಗಿತ್ತು. ಕುಳಿತುಕೊಳ್ಳಲು ಜಾಗ ನೀಡಿ  ತುಕಡಿಸುತ್ತ ಜನರ ಮಾತು ಕೇಳುತಿದ್ದೆ, ಕಣ್ಣುಗಳನ್ನು ತೆರೆದಿರಲಿಲ್ಲ (only audio no video) ಅವರ ಮಾತುಗಳಲ್ಲೆ ಗೊತಾಯ್ತು ನಿತ್ಯ ಒಂದೇ ಬೋಗಿಯಲ್ಲಿ ಪ್ರಯಾಣಿಸುವವರು ಎಂದು...


ಎದುರುಗಡೆ 25-29 ವರ್ಷದ  5- 5.2 ಅಡಿ ಎತ್ತರ ಗೋದಿ ಬಣ್ಣದ ಹುಡುಗಿಯೊಬ್ಬಳು ಕಿಟಕಿಯ ಹೊರಗೆ ನೋಡುತ್ತ ಯಾವುದೊ ಯೋಚನೆಯಲ್ಲಿದ್ದಳುರೈಲು ಮುಂದಿನ stationಲಿ ನಿಂತಾಗ ಸ್ವಲ್ಪ ಗಾಳಿಯಾಡುತಿತ್ತು. ಟೀ, ಕಾಪಿ,ತಂಪುಪಾನಿ, ಇಡ್ಲಿ,ಮಸಾಲ ಮಂಡಕ್ಕಿ,ಮದ್ದುರ್ ವಡಾಗಳನ್ನು ಮಾರುವ ಹುಡುಗರು,ಹೂ,ಹಣ್ಣುಗಳ ಬುಟ್ಟಿಯನ್ನು ಹೊತ್ತ ಹೆಂಗಸರು ಜೋರಾಗಿ ಕೂಗುತ್ತಾ ಬರದಿಂದ ವ್ಯಾಪಾರ ಮಾಡುತಿದ್ದರು
ಎದುರಿಗಿದ್ದ ಹುಡುಗಿ ಒಂದೇ ಸಮನೆ ಅಳುತಿದ್ದಳುಸ್ವಲ್ಪ ಗಲಿಬಿಲಿಗೊಂಡೆ  ಮುಖ ತೊಳೆದು ಸ್ವಲ್ಪ ಸಮಯ ಬಾಗಿಲಲ್ಲಿ ನಿಂತು ಬಂದೆ ಓಡುವ ರೈಲಿನ ವೇಗದಂತೆ ಅವಳ ಕಣ್ಣೀರಿನ  ನದಿ ಹರಿಯುತ್ತಲೆ ಇತ್ತು.ಎಚ್ಚೆತ್ತ ಅವಳು ಕಣ್ಣೀರು ತಡೆಯಲು ಕರವಸ್ತ್ರಕಾಗಿ ಹುಡುಕಾಡಿದಳು , ಹುಡುಕುತ್ತಲೆ ಇದ್ದಳು .ಅದು ಮಾತ್ರ ಸಿಗಲಿಲ್ಲ ಇದೆಲ್ಲ ಒರೆ ಕಣ್ಣಲ್ಲಿ ನೋಡುತಿದ್ದೆ,bag ಇಂದ ಇನ್ನೊಂದು ಕರವಸ್ತ್ರವನ್ನು ತೆಗೆದು ಅವಳ ಮುಂದೆ ಹಿಡಿದಾಗ no thanks ಅಂದಳು  its ok you can take it ಹೇಳಿ ನೀಡಿದೆ.ಕಣ್ಣಿರು ತಡೆದಷ್ಟು ತಡೆಗೋಡೆ ಒಡೆಯೊತ್ತೆ ಅಂತ ಯಾರೋ ಹೇಳಿದ್ದೊ ,ಓದಿದ್ದೊ ನೆನಪಾಗಿ ಕೊನೆಗು ನನ್ನ ಕರವಸ್ತ್ರ ಹುಡುಗಿಯ ಕಣ್ಣಿರು ಒರೆಸಿತು ಅನ್ನುವ ಸಮಾದಾನ.ಸ್ವಲ್ಪ ಸಮಯ ನಾನು ಗಣೇಶಯ್ಯನವರ ಪುಸ್ತಕದಲ್ಲಿ ತಲೆ ಹಾಕಿದೆ.

Thank you ,i am ಸುಹಾಸಿನಿ ಯೆಂದು ಕೈ ನೀಡುತ್ತ  ಬೇಜಾರ್ ಆಗ್ಬೆದಿ ಎಂದಳು .ಅಳತಾ ಇದ್ದಿದ್ರಲ್ಲ ಅಂದಿದ್ದಕ್ಕೆ  ಹೊರಗೆ ನೋಡುತ್ತ ತಲೆ ಆಡಿಸಿದಳು . ಗಡಿಬಿಡಿಯಲ್ಲಿ handkerchief ಮರೆತು ಬಂದೆ ಕಾಣೊತ್ತೆ ,ಕಣ್ಣೊರೆಸುತ್ತ ಬಾರದ ನಗುವಿನಲಿ.
 ಸುಮ್ನೆ ಮಾತಾಡಿಸಿ ನೋಡೊಣ ಅಂತ "ಅಳುತ್ತಾ ಇದ್ರಲ್ಲ ಯಾಕೆ" ದುಃಖಕ್ಕೆ ಜೊತೆ/ಹೇಳಿಕೊಂಡರೆ ಸಮಾದಾನ/ಕಡಿಮೆ ಅಗೊತ್ತೆ.
what you doing ಕೇಳಿದಾಗ doing research in Biology  ಅಂದಳು. ಯಾವ ವಿಷಯದಲ್ಲಿ ಕೇಳಿದೆ
plants pregnancy”
ನನ್ನ ಕುತುಹಲ ಕಂಡು ಮುಂದುವರೆಸುತ್ತ  " ನೈಸರ್ಗಿಕವಾಗಿ ಹೂವಿನ ಮೇಲೆ ಬೀಳುವ ಸಾವಿರಾರು ಪರಾಗರೇಣುಗಳಲ್ಲಿ ಸ್ಪರ್ಧೆ ಉಂಟಾಗಿ ನಿರ್ದಿಷ್ಟ ,ಬಲಿಷ್ಠವಾಗಿರುವುದು ಮಾತ್ರ ಕೊನೆಗೆ ಬೀಜೋತ್ಪಾದನೆಯಲ್ಲಿ ಪಾಲುದಾರರಾಗುತ್ತವೆ”.
ಬಾಳೆಗಿಡಗಳಲ್ಲಿ pregnancy ಹೇಗೆ ನಡೆಯುತ್ತದೆ, ಗಡ್ಡೆಯಲ್ಲಿ ಮೊಳಕೆಯೊಡೆದು ಗಿಡವಾಗೊತ್ತೆ .
ಅಲ್ಲಿಯೂ pregnancy ನಡೆಯುತ್ತವೆ ಗುರುತಿಸುವ ಕಣ್ಣು ನಮ್ಮದು ಆಗಿರಬೇಕು ಎಂದಳು.

ನಮ್ಮಂಗೆ ಸಸ್ಯಗಳಲ್ಲಿ ಬೀಜಗಳ ಬೆಳವಣಿಗೆ,ಪ್ರಸಾರಕ್ಕಾಗಿ ಒಂದು ಹಣ್ಣಿನಲ್ಲಿಟ್ಟು ಬೆಳೆಸುವದು, ಆಹಾರ ಒದಗಿಸಿ ಕಾಪಾಡುವುದು ಹೆಣ್ಣಿನ ಭಾಗ. ಗಂಡು ಕೇವಲ ಒಂದು ಪರಾಗರೇಣುವನ್ನು ಮಾತ್ರ ಕೊಡುತ್ತವೆ. ಹೆಣ್ಣಿಗೆ ಮಾತ್ರ ಸಮಾಜದಲ್ಲಿ ಕಷ್ಟ ಗಂಡಿಗೆ ಇರುವುದಿಲ್ಲ.
love failure ಆಯ್ತಾ  ಕೇಳಿದಕ್ಕೆ shock ಆಗಿ ತಲೆ ಆಡಿಸುತ್ತ ಹೌದೆನ್ನುತ್ತಾ
“ PHD ಆರಂಭದ ದಿನಗಳಲ್ಲಿ ಮಾಹಿತಿ ಕಲೆಹಾಕುವಲ್ಲಿ ಸಂಗಾತಿಯಾಗಿ ಸಹಾಯಕ್ಕೆ ಬಂದ senior ನ ಚತುರತೆ ,ಬುದ್ದಿವಂತಿಕೆ, ಅಂದ-ಚಂದಕ್ಕೆ ಮರುಳಾಗಿ ಕೇಲವೆ ದಿನಗಳಲ್ಲಿ ಸ್ನೇಹ ಭಾವನಾತ್ಮಕ ಅನುಬಂಧವಾದ  ಪ್ರೀತಿ-ಪ್ರೇಮವಾಗಿ ತಿರುಗಿ ಅವನಿಗೆ ಸೋತುಹೋದೆ . ಅವನು ಯೆನು ಮಾಡಿದನೊ ಹೂವಿಗೆ ದುಂಬಿ Attract ಆದ ಹಾಗೆ ನಾನು ಅವನಿಗೆ ಆಗಿದ್ದೆ.ಜೀವನ ಕಟ್ಟುವ ಎಷ್ಟೊ ಕನಸಿನ ಬೀಜಗಳು ಮೊದಲ ಮಳೆಯ ನೀರಿಗೆ ಚಿಗುರಿತ್ತು,
ಅವನು ಸಹಾಯಕ್ಕೆ ಬಂದಿದ್ದೆ ಮುಳುವಾಯಿತು phd ವಿಷಯದ ದಿಕ್ಕೆ ಬದಲಾಗಿ ಸಂಗ್ರಹದ ಮಾಹಿತಿಯ ತಿರುಳನ್ನೆ ತಿರುಚಿಯಗಿತ್ತು.ಥೀಸೀಸ್ ಬರೆಯುವಾಗ ನಾನು ಮೋಸ ಹೊಗಿದ್ದೆ  ಬೇಕಾದ ಮಾಹಿತಿಗೆ ಅವನ ಕೈ ಸೇರಿ ಅದಕ್ಕೆ ಹಣ ಪಡೆದಾಗಿತ್ತು.
ಹುಡುಗಿಯರು ಮಾತ್ರ ಕೈ ಕೊಡುತ್ತಾರೆ ಅಂದುಕೊಂಡ್ರೆ ತಪ್ಪು  ಹುಡುಗರು ಕೊಡುತ್ತಾರೆ. ಬೇರೆ ಯಾವುದೊ ಹುಡುಗಿ ಜೊತೆ Engagement ಮಾಡಿಕೊಂಡಿದ್ದ , ಕೇಳಿದರೆ ನನ್ನ ಅಂತಸ್ತಿಗೆ ಸರಿಯಾದ ಜೋಡಿನಿನಲ್ಲ ಎಂದಿದ್ದ.
ಗಂಡುಗಳಲ್ಲಿ ಸೂಕ್ತವಾದವನ್ನು ಆರಿಸುವ ಸಸ್ಯಗಳನ್ನು ಸಂಶೊಧನೆ ಮಾಡುತ್ತಾ personal life ನಲ್ಲಿ ಸೋತಿದ್ದೆ.”
ಒಂದೇ ಸಮನೆ ಅಳುತಿದ್ದಳು. ಯೆನು ಮಾಡಬೇಕು ಅಂತ ಗೊತ್ತಾಗದೆ "ಕರೆದು ಕಚ್ಚಿಸಿ ಕೊಂಡ " ಹಾಗಾಯಿತು.

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕುದಿನದ ಈ ಬದುಕಿನಲಿ ||
 - ಜಿ. ಎಸ್. ಶಿವರುದ್ರಪ್ಪ ಅವರ 4 lines ಗಳು ನೆನಪಿಗೆ ಬಂದವು

ಸಾಂತ್ವಾನ ಮಾತುಗಳನ್ನು ಹುಡುಕುತಿದ್ದೆ “
ನಾವು ಕೇವಲ Attarctionನನ್ನು Love ಅಂದುಕೊಳ್ಳುತ್ತೆವೆ,ಆದರೆ Love & life ನಡುವಿನ Spelling ವ್ಯತ್ಯಾಸ ಆಮೇಲೆ ಗೊತ್ತಾಗೊತ್ತೆ . ಪ್ರೀತಿಯಲ್ಲಿದ್ದವರಿಗೆ ಒಳಿದೆಲ್ಲವು ಶೂನ್ಯ ,Attarction ಎಷ್ಟು ಪ್ರಬಲವಾಗಿರೊತ್ತೆ ಅಂದರೆ ದೊಡ್ದವರನ್ನಾಗಿ ಮಾಡಿದ ತಂದೆ-ತಾಯಿ , ಜೊತೆಗೆ ಬಂದ ಅಕ್ಕ-ತಮ್ಮಂದಿರು ಶೂನ್ಯ.
ಪ್ರೀತಿ ಮಾಡೊದು ತಪಲ್ಲ ,ಅದು ಪ್ರಕೃತಿಯಲ್ಲಿನ ಸಹಜ ಗುಣ, but Love is not a life its part of our life ಆಗಿರಬೇಕು. ಅದರಿಂದ ಹೆಚ್ಚು-ಕಡಿಮೆಯಾದ್ರೆ ನಮಗೆ ನಷ್ಟ.ಮನೆಯವರಿಗು ಬೇಜಾರು...
ಸ್ವಲ್ಪ ಸಮಯವಷ್ಟೆ ಕಾಲ ಚಕ್ರದಲ್ಲಿ ನೋವು ಮರೆಯಾಗೊತ್ತೆ
ಕನಸು ಕಾಣೊದು ಬೇರೆ ಕನಸು ಬಿಳುವುದು ಬೇರೆ ಎಷ್ಟೋ ಸಲ ಕನಸು ಕಂಡಿರೋದು ನೀಜವಾಗಲ್ಲ ಕನಸು ಬಿದ್ದಿರೊದು ನೀಜವಾಗೊತ್ತೆ ಕನಸು ನಮ್ಮೊಳಗಿನ ಪ್ರತಿಬಿಂಬ.
Mobile,e-mail,facebook,whatsapp ಗಳು ಬಂದಿರುವದು ನಾವುಗಳು ಹತ್ತಿರವಾಗಲು..
Life is short ,live it,enjoy it.
Life ಅನ್ನೊದು ನೀರಿನ ಮೇಲಿನ ಗುಳ್ಳೆ ಇದಂಗೆ.
ನೋವು ಎಲ್ಲರಿಗು ಆಗೊತ್ತೆ, ನೋವು ನಲಿವುಗಳ ನಡುವೆ ಇರುವುದೆ ಜೀವನ.Expectaion ಕಡಿಮೆ ಇದಷ್ಟು ನೋವಿನ ಆಳ ಕಡಿಮೆ.
ಶ್ರೀಕೃಷ್ಣ &ರಾಧೆ ನಡುವೆ ಲವ್ ಇದ್ರು break up ಆಗಿ ರುಕ್ಮಿಣಿ ಮದುವೆ ಆಗಲಿಲ್ಲವೆ ,ಅವಳಲ್ಲಿ ರಾಧೆ ಕಾಣಲಿಲ್ಲವೆ?

ಕೊನೆಯ ಇಳಿಯುವ station ಬರುತ್ತಾ ಇತ್ತು.
thank u for ur valuable suggestion really i liked that ...today u saved my life ಎಂದಳು
 ಕೈಕುಲುಕುತ್ತ  .ಮನುಷ್ಯ ಇನ್ನೋಂದು ಮನುಷ್ಯನ ಸಹಾಯಕ್ಕೆ ಬರದಿದ್ದರೆ ಯೆನು ಪ್ರಯೋಜನ ಅಯ್ತು. ಬಾಯ್ ಹೇಳುತ್ತಾ ನಿಂತ ರೈಲಿನಿಂದಿಳಿದು ಜನರ ಮದ್ಯೆ ಮರೆಯಾದೆ.

ದಿನವು ಯಾರ್ ಯಾರೋ ಸಿಗುತ್ತಾರೆ , ಮಾಯವಾಗುತ್ತಾರೆ , ನೆನಪಾಗುತ್ತಾರೆ , ಮರೆಯುತ್ತೆವೆ , ಮಾತನಾಡುತ್ತಾರೆ, ಮೌನಿಗಳಾಗುತ್ತಾರೆ  ಇದೆಲ್ಲ ಕಾಮನ ಬಿಲ್ಲಿನ ಹಾಗೆ ಸ್ವಲ್ಪಸಮಯ ಬಂದು ಮಾಯವಾಗುವುದು ಕಾಲಗಭ೯ದಲಿ ಎಲ್ಲವೂ ಶೂನ್ಯ.....



Sunday, August 17, 2014

ಬಾ ಬೆಳಕೇ

ನಿನ್ನೆ ಎಂಬುದರ ನೆನಪು ಅಳಿಸಿ
ನಾಳೆ ಉದಯದ ಕನಸು ಉಳಿಸಿ
ಇಂದಿನ ದಿನದ ಅರ್ಥವ ತಿಳಿದು
ಕಲಿಕೆಯ  ಪಥದಲಿ ಸಾಗುತಿದೆ ಬದುಕು ....

ಹಸಿರಾಗಿದೆ ಮನಸು ಭತ್ತದ ಸಸಿಗಳಂತೆ
ನಿರ್ಮಲವಾಗಿದೆ ಹರಿವ ನೀರಿನಂತೆ
ದೃಡವಿದೆ ಬೆಟ್ಟದ ಕಪ್ಪು ಬಂಡೆಯಂತೆ
ಹಳೆಯ ನೆನಪುಗಳು ನೋವಾಗಿ  ಚುಚ್ಚುತಿದೆ ...

ಸೊರಗಿದ ಮನಕೆ ಉಸಿರಾಗಿ ಬಾ ಬೆಳಕೆ
ಕಾಣದ ದಾರಿ ತೋರುವ ದೀಪವಾಗಿ
ಕತ್ತಲೆಯಿಂದ  ಬೆಳಕಿನೆಡೆ ಸಾಗಲಿ ಬದುಕು
ನಕ್ಷತ್ರದಂತೆ ಅಲ್ಲದಿದ್ದರೂ ಮಿಣುಕು ಹುಳದಂತೆ  ಮಿನುಗಲಿ ಬದುಕು
ಬಾ ಬೆಳಕೇ ಒಮ್ಮೆ ಬಾಳದೀವಿಗೆಯಾಗಿ 

Wednesday, August 13, 2014

ನಮ್ಮೂರ ಮಳೆ

ಮಳೆಗಾಲದಲ್ಲಿ ಮಳೆ ಬಂದಾಗ ಅಕ್ಕ ಪಕ್ಕಗಳಲ್ಲಿ  ಬಿದ್ದ ನೀರು  ಹನಿ ಹನಿಯಾಗಿ ಒಂದುಗೂಡಿ ಚರಂಡಿ ,ತೋಡುಗಳಲ್ಲಿ ಹರಿದು ತಿರುಗಿ ಹೊಳೆಯಾಗಿ ಪ್ರವಾಹವಾಗುತ್ತವೆ .....
ಇದು ನಾವು ಪ್ರಾಥಮಿಕ ಶಾಲೆಯಲ್ಲಿ ಬರೆದ ಮಳೆಗಾಲದ ಒಂದು ದಿನ ಪ್ರಬಂಧ .
.................................................. .................................................. ..................................................

ಈ ಮಳೆಗೋ  ಶಾಲೆಗಳು ಬಿಡುವ ಸಮಯ,ಆಟವಾಡುತಿರುವಾಗ ,ಬಸ್ ಬಂದಾಗ,ಬಟ್ಟೆ ಬಿಸಿಲಿಗೆ ಹಾಕಿದಾಗ, bike ಲಿ ಹೋಗುತಿರುವಾಗ ,ಕೈಲಿ documents /loveletter  ಇದ್ದಾಗ ಅನೀರೀಕ್ಷಿತವಾಗಿ ಬಂದು ದಬ ದಬ ದಬ ಅಂತ ಸುರಿದು ಹೋಗುವುದೆಂದರೆ ತುಂಬಾ ಪಿರುತಿ ..

ನಮ್ಮೂರಲ್ಲಿ ಮಳೆಗಾಲ ಅಂದ್ರೆ ರಸ್ತೆಯಲ್ಲಿ ತುಂಬಿಕೊಂಡಿರುವ ಹೊಂಡಗಳೂನ್ನು ತಪ್ಪಿಸಲಾಗದೆ ಬೀಳುವವರು, ಬಸ್ಸು ,ಕಾರುಗಳ ಚಕ್ರಗಳಿಂದ ಹಾರಿದ ಕೆಂಪು ನೀರು ಶಾಲೆ ಮಕ್ಕಳ ಬಿಳಿ  ಶರ್ಟ್ ಗೆ  ಬೀಳುವುದು , ಅದನ್ನು ಕೊಡೆ ಹಿಡಿದು ತಪ್ಪಿಸಿಕೊಳುವುದು  , ಪ್ಲಾಸ್ಟಿಕ್ ಕೊಪ್ಪೆ ಹಾಕಿ ಗದ್ದೆ ನಾಟಿಗೆ ಹೋಗುವವರು,  ಸಂಕದಲ್ಲಿ ನೆಗ್ಸಿನ  ಕಾಯಿ ಹಿಡಿಯುವುದು,
ಸೊಪ್ಪಿನ ಹೊರೆಯನ್ನು ಸೈಕಲ್ ಮೇಲೆ ತರುವ ಗಂಡಸರ , quarter ಕುಡಿಯಲು ಗದ್ದೆ,ಹೊಳೆಯನ್ನು ಹಾದು ಬರುವವರು ,
ಕೆಂಪು ನೀರು ಬಂದಿದೆ ಎಂದು ಗಾಳ ಹಾಕುವವರು, ಹಾಕಲು ಶೆಟ್ಟರ್ ಅಂಗಡಿಗೆ ಸಿಸ , ತಂಗಿಸ್ ಗೆ line ನಿಲ್ಲುವವರು ,
 ಗಾಳ ಮಾಡಿ ಕೊಡುವ ಚಡ್ಡಿಬಾಳನ ಹಿಂದೆ ೩-೪  ಮಕ್ಕಳು ಗಾಳಕಾಗಿ,  ಗದ್ದೆಯಲ್ಲಿ ಗುಳ್ಳೆ ಹೆಕ್ಕಲು & ಮೀನು ಕಡಿಯಲು ಸೊಂಟಕ್ಕೆ ಕತ್ತಿ  ಕಟ್ಟ ಕೆಕ್ಕರು ಗೌಡ್ರು,ಬಲೆ ಬಿಸಿ ಕುಳಿತ ಮೋಹನ್ ಅಂಬಿಗನು,  ಅಣಬೆಗಾಗಿ ಹುತ್ತ,ಬೆಟ್ಟ ಹುಡುಕುವ ಜನರು,
 break ಇಲ್ಲದ ಗಾಡಿಯಲ್ಲಿ ಅಡಿಕೆ ಮದ್ದು ಹೊಡೆಯುವ  ಪಾಂಡುರಂಗನ ಬರುವಿಕೆಗೆ ಕಾಯುವ ಜನ... ಇವೆಲ್ಲ ಕಾಮನ್ ....

ಬಂದ ಮಳೆ ಸುಮ್ಮನೆ ಸುರಿಯದೆ ನೆನಪುಗಳ ಬೀಜಕ್ಕೆ ನೀರೆರೆದು ಹೋಗೊತ್ತೆ
ಅದೆಕೋ ಶಾಲೆಗಳಿಂದ  ಮಳೆಯಲ್ಲಿ ನೆನೆಯುತ್ತ ಸಾವೇರ ನ ಜೊತೆ ಬೊಳುಗುಡ್ಡದ ನೀರಿನ ತೊರೆಯಲ್ಲಿ color color ದೋಣಿ ಬಿಡುವುದು ಯಾರ ದೋಣಿ ಜಾಸ್ತಿ ದೂರ ತೆಲೋತ್ತೆ ಅಂತ ನೋಡುವುದು ಕೊನೆಗೆ ಕಾಗದ ಮುಗಿದು notebookನ  middle ,ಕೊನೆಯ ಹಾಳೆಗಳನ್ನೂ ಹರಿದು ದೋಣಿಮಾಡಿ ಬಿಡುವುದು ., ಗಣ್ಣಿಯ ಸುಳು ಕಥೆಗಳನ್ನೂ ಕೇಳುತ್ತ ಮಠದ ಗುಂಡಿಯಲ್ಲಿ ಚಂದ್ರಪ್ರಭೆಗೆ ಬರುವ ನೆಗ್ಸಿನ ಆ ನೀರಿನಲ್ಲೂ ಕಟ್ಟಿಗೆ ,ನಾಟು  ,ಕಾಯಿ ಹಿಡಿಯುವ ರಾಮಕೃಷ್ಣ bridge  ತುಂಬಿದಾಗ  ದಾಟಿಸುತಿದ್ದ . .

ಇನ್ನು ತೋಟಕ್ಕೆ ನೀರು ಬಂದಾಗ ಸುನಿಲ್  ಜೊತೆ ಬಟ್ಟೆ ವದ್ದೆ ಮಾಡಿಕೊಂಡು ಹಾದು ನೆಗ್ಸನ್ನು ನೋಡಿ , ಗದ್ದೆಯ ನೀರಿನಲ್ಲೇ ಮುಳುಕು ಹಾಕಿ ಮಿಸಾಡಿ , ಸಮತಟ್ಟಾಗಿ  ಹರಿಯುವ ಹೊಳೆ ನೋಡಿ ಅದ್ರ ಮೇಲೆ ನಡೆಯಲು ಬಂದಿದರೆ ...


ದೊಡ್ಡ ನೆಗ್ಸಿನಲ್ಲಿ ಬರುವ ,ಕಟ್ಟಿಗೆ ನಾಟುಗಳಿಗೆ  ರಾಮಕೃಷ್ಣ ,ಗಣ್ಣೀ  ನಾಟಿನ  ಮೇಲೆ ಸೆಳೆತದಲ್ಲೂ  ಕುಳಿತುಕೊಂಡು ಹೋಗಿ ಹಿಡಿಯುತಿದ್ದರು ,ಇನ್ನು ತುಳಸುವಂತೂ ಭತ್ತದ ಸಸಿಗಳನ್ನು ತೆಪ್ಪದ ಹಂಗೆ ಮಾಡಿ ಆದರಲ್ಲಿ ಕುಳಿತು ತರುತಿದ್ದ & ಮಾರನೆ ದಿನ ಸಿಕ್ಕಾಗ ನಾನು ತತ್ತೆ  ಹೇಳಿ  ಮತ್ತೆ ಯಾರು ಹಂಗೆ ತರುದಿಲ್ರ ಅದ್ಕೂ  ಕಲೆಬೇಕು .... 

ಅಂಬಿಗ ಮೋಹನ್ ಸುಮಾರು  ೩೦೦ ಕಾಯಿ ಹಿದ್ದ ,ಕಟ್ಟಿಗೆ ಅಂತು ೨-೩ ಗಾಡಿ ಆಗುದು  ರಾತ್ರೆ ದೊಡ್ಡ ನೀರು ಬಂದಿತಕು  ನಾಟು ಸಂಕಕ್ಕೆ ಹೊಡಿದು  ಸಂಕ ಮುರ್ದು ಬಲ್ಕೊಂದು ಹೋಯ್ತು ,ನಾನು ಚಂದವರ್ ಮೇಲಿಂದ ಬಂದೆ late ಆಗೋಯ್ತು ಎಂದು ಕೆಲಸಕ್ಕೆ ಬರುವ ನಾರಾಯಣ ..

ಕೆಲಸದ ಲಕ್ಷಿಯಂತು  "ಮಳೆ ಬತ್ತದೆ ಹೋಗ್ತದೆ ಬಟ್ಟೆ ಹಾಕಿ ತೆಗ್ಡಿ ಸಾಕು ಆಗೋಯ್ತು ಎಷ್ಟು ಹುಳಕುಮಾಡ್ತದೆ .... ಅದೇನೋ ಹೇಳ್ತ್ರಲ್ಲ  ಮಳೆಗಾಲದ ಮಳೆ ಪ್ರಾಯದ ಹುಡುಗಿಯನ್ನು ನಂಬುಕೆ ಆಗಂತೆ ಹವ್ದ್ರ "...

ಇನ್ನು ಅಡಿಕೆಗೆ ಕೊಳೆ ಮದ್ದು ಹೊಡೆಯಲು  ಪಾಂಡುರಂಗನ ಗಾಡಿಗೆ  ಕೈ ಮಾಡಿದ್ರೆ  ೧೦ ಮಾರುಹೋಗಿ ಸುಯ್ ಎಂದು ಕಾಲು ಕೊಟ್ಟು ತಿರುಗಿಸ್ಕೊಂದು ಬಂದು ಹೆಂಗ್ರ  break ಇಲ್ಲ ಅದ್ರು ಒಂದು ಹೋಂಡ  ಹಾರ್ಸುದಿಲ್ಲ ಎಲ್ಲಿ ಬೇಕೋ ಅಲ್ಲಿ ಹೊಗ್ತೆ ಬ್ಯಾಲೆನ್ಸ್ ಬೆಕ್ರ...  ಮದ್ದು ನಾಳೆ ಬೇಡ್ರಾ ಚಡ್ಡಿ ಬಾಳ ಹೊಡಿತಮ್ತೆ  ಅವ ಹೊಡಿಯುವಾಗ ಮಳೆಜೋರೆ ಬತದೆ ...

ನಮ್ಮ ಕರಾವಳಿಯ ಮಳೆ ನೋಡಿ ಬಯಲು ನಾಡಿನವರು ಬಸ್ಸಿನಲ್ಲಿ "ಜನ ಇರೋ ಕಡೆ ಮಳೆ ಬರೋತ್ತೆ ನಮ್ಮ ಹೊಲದಾಗೆ ಬಂದ್ರೆ ಬಂಗಾರದಂಗ ಬೆಳೆ ಬೇಳಿತಿದ್ವಿ ,ಸಮುದ್ರ ಇರೋ ಕಡಿಗೆ ಜಾಸ್ತಿ ಸುರಿಬೇಕ  ಈ ಮಳಿ ... ನಿಮ್ಮಗೆ ಏನು ಸಮುದ್ರ ಇದೆ ನೀರಿಗೆ ಬರ ಇಲ್ಲ.... ..


ಮಳೆಯಲ್ಲಿ ನೆನೆಯುವಾಗ ಅಳುವುದು ಯಾರಿಗೂ ಗೊತ್ತಾಗುವುದಿಲ್ಲ ....  ಮಳೆಯೇ ಕಣ್ಣಿರನ್ನು ಒರೆಸುತ್ತದೆ... 

Wednesday, July 3, 2013

nna



ಒಡೆದು ಹೋದ ಕನ್ನಡಿ ಒಡಲ ನೋವಿಗೆ ಮುನ್ನುಡಿ...ಕನಸುಗಳು ನಮ್ಮೊಳಗಿನ ..**********************************************************************************************************************************

ಸರ್ಕ್ಯೂಟ್ ಹೌಸ್ signalನಲ್ಲಿದ್ದ police ಶಂಕರಪ್ಪ ಗೆ ಮಂಜಣ್ಣ " ಏನ್ ಸರ್ traffic duties ಹಾಕಿದಾರಾ ಸಿಕ್ಕಾಪಟ್ಟೆ collection ಆಗಿರಬೇಕು ಬರೀ ಹುಡುಗ್ರಿಗೆ ಮಾತ್ರ ಹಿಡಿಬೇಡಿ ಸ್ವಲ್ಪ ಹುಡುಗಿರಿಗು antyಗಳಿಗು ಹಿಡಿರಿ, ಇವ ನಮ್ಮ ತಮ್ಮ ನೊಡ್ಕೊಳ್ಳೀ ಹಿಡಿದುಬಿಟಾರು, ಹಸಿರು ನಿಶಾನೆಗಾಗಿ ಕಾಯುತ್ತಿರೊವಾಗ ಪಕ್ಕದಲ್ಲಿರೊ Renault Dusterನ power window ಇಳಿಸುತ್ತ ಯೆನ್ ಮಂಜಣ್ಣ ಎಲ್ಲಿಗೆ ಸವಾರಿ ..ಒಹ್ ನಮಸ್ಕರಾ Doctor ಗೆ ಇಲ್ಲೆ auto complex ಗೆ ಕಾರಿನ spare ತರಲು ,ನಾನು ಆಕಡೆಗೆ ಯೆಂದು ಹೇಳಿದರು auto complex ನಲ್ಲಿ ನನ್ನ ಬೆನ್ನಿಗೆ ಹೊಡೆಯುತ್ತ ತಮ್ಮ ಹೊನ್ನಾವರ ಆಯ್ತು & ಇವರು ಡಾ|| ಆನಂದಪೈ ಯೆಂದು ಮಂಜಣ್ಣ .ಆವಾಗ ಡಾ|| ಆನಂದ ನಮ್ಮ ಹಾತ್ರಾ ನಿಮ್ಮ್

Saturday, February 16, 2013

love happens

love happens only once ,,,
once in school
once in Pu
once in Degree


love at first sight ಕೆಲವರಿಗೆ ಆದರೆ ಇನ್ನುಳಿದವರಿಗೆ love at different different sight.
ಕೆಲ ಹುಡುಗರಿಗೆ ಹುಡುಗಿಯರ ಕಣ್ಣು ಚಂದವಾದರೆ ಇನ್ನುಕೆಲವರಿಗೆ ಮೂಗು ,ತುಟಿ ,ಮುಖ ,ತಲೆ ಕೂದಲು height ,weight ,figure ಅವರವರ ಭಾವಕ್ಕೆ ತಕ್ಕಂತೆ .....

for example filmನ hero & heroine ತೆಗೆದುಕೊಂಡರೆ ಎಲ್ಲರಿಗು aishwarya,shrunk, salman ಫ್ಯಾನ್ಸ್ ಅಲ್ಲ ,ಕೆಲವರಿಗೆ ದೀಪಿಕಾ ಮಾದುರಿ ,ಕಾಜೋಲ್ ,ರಾಣಿ ,ಪ್ರೀತಿ ,ಕರೀನಾ ,ಗಳ ಫ್ಯಾನ್ಸ್ ಗಳು ಇದ್ದಾರೆ ...
ಆ celebrityಗಳಿಗೂ ಕೆಲವು celebrity ಗಳ ಜೊತೆ ಕದ್ದು ಮುಚ್ಗಿ
love affairಗಳಿರುತ್ತವೆ .popularity & ಕೇವಲ ಹಣವನ್ನು ಮಾತ್ರ ನೋಡಿರುತ್ತಾರೆ ..


ಸಾಮಾನ್ಯ ಹುಡುಗ ಹುಡುಗಿಯರು ಅವರ ಮೆಚ್ಚಿನ hero/heroine ಹೋಲಿಕೆಯವರನ್ನು love ಮಾಡಲಾರಂಭಿಸುತ್ತಾರೆ .


ಹರೆಯದಲ್ಲಿ ಕೆಲವೊಮ್ಮೆ ವಿಪರೀತ ಖುಷಿ ,ಅತಿಯಾದ ದುಃಖ ,ಕಾಡುವ ಒಂಟಿತನ ,ಕುತೂಹಲ ,ಬೇಜಾರು ಹೀಗೇ ನಾನಾ ಭಾವಗಳು ಕಾಡುತ್ತವೆ
ಹರೆಯದಲ್ಲಿ ಕನಸು ಆಪ್ತ ಸಖಿ .
ಪ್ರೇಮಕ್ಕೆ ಹಾತೊರೆಯುವವರ ,ಪ್ರೇಮಕ್ಕೆ ಬಿದ್ದವರ ,ವಿಫಲವಾದವರ ಕನಸುಗಳೇ ಬೇರೆ ಬೇರೆ.

ಪ್ರಾಥಮಿಕ ಶಾಲೆಗಳಲ್ಲಿ ಹುಡುಗ ಹುಡುಗಿಯರಲ್ಲಿ ಹೆಸರುಗಳನ್ನೂ ಚಾಳಿಸುವುದರಲ್ಲೇ ಸಂತೋಷ ಪಡುತಾರೆ ..

ನಿಜವಾಗಲು ಫ್ರೌಡ ವಸ್ಥೆಗೆ ಬರುವುದು high scholl ಗಳಲ್ಲಿ ,
ಹುಡುಗರ ಮೀಸೆ ಚಿಗುರುವ ವಯಸ್ಸಿನಲ್ಲಿ film ಗಳ ಪ್ರಭಾವಕ್ಕೆ ಒಳಗಾಗಿ
ಮೊದಲ ಸಲ ಹುಡುಗಿಯ ಆಕರ್ಷಣೆಗೆ ಒಳಗಾಗಿ ಏನಂತ ತಿಳಿಯದೆ films, ಕಥೆ ,friends ಗಳ ನೋಡಿ ಕೇಳಿ ಲವ್ ಆಗಿದೆ ಅಂತ ಅರ್ಥವಾಗೊತ್ತೆ .
ನಿದ್ದೆ ಬಾರದೆ ಹೊರಳಾಡಿ ಕೊನೆಗೂ love letter ಬರೆಯಲು ನೀರವ ರಾತ್ರಿಯಲ್ಲಿ ಆರಂಭಿಸುತ್ತಾನೆ .
ಶಾಲೆಗಳಲ್ಲಿ ಆಧ್ಯಪಕರು ಬರೆಸುತಿದ್ದ leave letter ಮಾತ್ರ ಬರೆಯಲು ಬರುವುದು .ಆವಾಗ ಆಧ್ಯಾಪಕರು love letter ಬರೆಯಲು ಹೇಳಿ ಕೊಟ್ಟಿದರೆ ಗಂಟು ಕಡಿಮೆ ಆಗುತಿತ್ತ ,ಸುಮ್ಮನೆ ತ್ರಾಸ್ ಪಡುವುದು ಕಡಿಮೆಯಾಗುತಿ ತ್ತು ,ಗೊಣಗಿಕೊಳ್ಳುತ್ತಾ
leave letter ಬರೆದಂಗೆ TO.. .FROM ಬರೆಯಲು ಅದು ಸರಿಯಾಗದೆ Dust bin ಪಾಲಾಗುತದೆ .
Dust bin " ಎಲ್ಲರು ಮೊದಲ love letter ಕೊಡುವುದು ನನಗೆ " ಹೇಳಿ ನಗುತ್ತದೆ .
ಹಾಳೆ ಖಾಲಿ ಆಗುತ್ತಾ ಹೋದಂಗೆ dust bin ತುಂಬುತ್ತ ಹೋಗಿ ಅಂತು ಇಂತೂ letter ready ಮಾಡಿದಗಲೇ ಅವಳಿಗೆ ಕೊಡುವುದು ಬಗ್ಗೆ
ಯೋಚಿಸುತಿರುವಗಲೇ ಬೆಳೆಗಾಗಿರೊತ್ತೆ .ಎಲ್ಲರೆದುರು ಕೊಡಲು ಧೈರ್ಯ ಧಂ ಇಲ್ಲದೆ ,ಆವಳು ಒಂಟಿಯಾಗಿ ಸಿಕ್ಕಾಗ ಕೊಡಲೆಂದು ಕಾಯುತ್ತ 3--4 ದಿನ ಕಳೆದಿರೊತ್ತೆ .
science teacher ರಾಕೆಟ್ & ವಿಮಾನಗಳ ಪಾಠ ಕಲಿಸುತ್ತ Wright brothers ರ ಆವಿಷ್ಕಾರವನ್ನು ವಿವರಿಸುತಿರುವಾಗ ಅವನ letter ರಾಕೆಟ್ ಆಕಾರ ತಾಳಿತು .
ರಾಕೆಟ್ ಗೆ ಕಿಚ್ಚು ತಗುಲಿದ್ದು science teacher black boardನತ್ತ ತಿರುಗಿದಾಗ ಅವಳತ್ತ ಎಸೆಯುತ್ತಾನೆ .
ಅರ್ಧಷ್ಟ ಬೇರೆ ಕೈ ಕೊಟ್ಟಾಗ Wright brothersಗೆ ಆದಂತೆ ಮೊದಲ ಉಡಾವಣೆಯು fail ಆಗಿ ಗುರಿ ತಲುಪದೆ ಮದ್ಯದಲ್ಲಿ ಬಿದ್ದಾಗ ,letter sir ಕೈಸೇರಲು ಎಲ್ಲರ ಎದುರು ಓದಿ ಮಡಚಿ ಕಿಸೆಯಲ್ಲಿಟ್ಟುಕೊಂಡು ಹೋದಾಗ ಅವಮಾನವಾಗಿ 3ದಿನ ಶಾಲೆಗೆ ಚಕ್ಕರ್ ..

ಒಂದೇ ಹುಡುಗಿ 7--8 ಹುಡುಗರ ಕನಸಿನ ರಾಣಿಯಾಗಿ ಎಲ್ಲರು ಗಾಳಹಾಕಿ ಕೊನೆಗೆ exam ನಲ್ಲಿ ಒಬ್ಬನೂ ಇಬ್ಬನೋ ಪಾಸಾಗಿ ಉಳಿದವರಿಗೆ ಕೈಯಲ್ಲಿ ಚಂಬೆ ಗತಿ .
ಬೇಗ ಬೆಳೆಯುವ ಹೆಣ್ಣುಮಕ್ಕಳು ತಮಗಿಂತ ಸ್ವಲ್ಪ ಹಿರಿಯರಾದ ಹುಡುಗರೊಡನೆ ಹೆಚ್ಚು ಬೆರೆಯುತ್ತಾರೆ . ಹುಡುಗರ ಗೆಳೆತನದಿಂದ ಸ್ವಲ್ಪವೇ ಮಾತಾಡಿದರು ತುಂಬಾ ಖುಷಿಪಡುತಾರೆ ಇಲ್ಲವೆ ನೊಂದುಕೊಳ್ಳುತ್ತಾರೆ .
filmಗಳ ಪ್ರಭಾವಕ್ಕೆ ಒಳಗಾಗಿ ಸಮಾನ ವಯಸ್ಸಿನ ಹುಡುಗರನ್ನು ಬಿಟ್ಟು ಟೆಂಪೋ ,ಕಾರ್ .ರಿಕ್ಷಾ ,ಡ್ರೈವರ ಗಳಿಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಾರೆ .real life ಗೂ reel life ಗೂ difference ಗೊತ್ತುಮಾಡಿಕೊಳ್ಳದೇ ಭವಿಷ್ಯ ಹಾಳುಮಾಡಿ ಕೊಂಡಿದ್ದು ಇದೆ .
ತಂದೆ ತಾಯಿಯರ ಮುಂದೆ ಒಂದು ರೀತಿ ಆದರೆ ಸ್ನೇಹಿತರೊಡನೆ ಬಿನ್ನವಾಗಿ ವರ್ತಿಸುತ್ತಾರೆ ,ಹಿರಿಯರೊಡನೆ ಲೆಕ್ಕಚಾರವಾಗಿ ವ್ಯವಹರಿಸುತ್ತಾರೆ

ಮೊದಲು dress make-upಗಳೆಂದರೆ ಆರಿಯದ ಹುಡುಗಿಯರು ,ಒಂದೇ ಸಲ ಕನ್ನಡಿ ಮುಂದೆ ನಿಂತು ಹುಡುಗರ ಗಮನ ಸೆಳೆಯುವುದರ ಬಗ್ಗೆ ಕಾತುರರಾಗಿರುತಾರೆ .lipstick , ibrow ,dress,make-up ಹೇಳುತ್ತಾ ಜಾಸ್ತಿ ತಲೆಕೆಡಿಸಿಕೊಂಡು ಎದ್ದು ಕಾಣಲು ತವಕಿಸುತ್ತ ಕದ್ದು ಮುಚ್ಚಿ ಹೊಸ ಹುಡುಗನನ್ನು ಕಾಯುತ್ತಾ ಹಾಡುವುದು ಮೊಗ್ಗಿನ ಮನಸ್ಸಿನ "ನಂಗು ಒಬ್ಬ ಗೆಳಯ ಬೇಕು "...
ಹಳ್ಳಿಯ ಹುಡುಗರಿಗಿಂತ ಪಟ್ಟಣದ ಹುಡುಗಿಯರೇ ಗಟ್ಟಿಗರು

ಇವೆಲ್ಲ ಹಳ್ಳಿ ಶಾಲೆಗಳಲ್ಲಿ ಯಾದರೆ ಪಟ್ಟಣದ ಶಾಲೆಗಳು ಸ್ವಲ್ಪ ಮುಂದಿರುತ್ತವೆ

ಮನಕ್ಕೆ ಶಾಂತಿ ಎಂಬುದಿಲ್ಲ ಯಾವುದೋ ಮಧುರ ಕ್ಷಣಗಳಿಗಾಗಿ ಹಾತೊರೆಯುತ್ತಿರುತದೆ ಯಾವುದೋ ಪುಣ್ಯಾತ್ಮನ ಬರುವಿಕೆಗಾಗಿ ಹಂಬಲಿಸುತ್ತಿರುತದೆ

Pu college ಗಳಲಂತೂ ಯಾರು ಕೇಳೋರಿಲ್ಲ, ಪ್ರತಿ busಗಳ ಲ್ಲೂ love storyಗಳು .bus ಗಳ ಕೆಲವು ಸೀಟ್ ಗಳು ಮೊದಲೇ reserve ಮಾಡಿ ಅವಳ /ನ ಬರುವಿಕೆಗೆ ಕಾಯುತ್ತಿರುತ್ತಾರೆ ಸಾರ್ವಜನಿಕ bus ಗಳು ಇಂದು ಪ್ರೇಮತಾಣ ವಾಗಿ ಹೋಗಿದೆ .

ಅವಳ್ಯಾರು ಏನು ಎಂತುಗೊತ್ತಿಲ್ಲ ,ಅಡ್ಡಹೆಸರು ಉದ್ದಹೆಸರು ,ಜಾತಿ ,ಊರು,ಭಾಷೆ ,ಎತ್ತರ ,ತೂಕ ,ಇಷ್ಟದ ತಿಂಡಿ ಗೊತ್ತಿಲ್ಲದಿದ್ದರೂ ಅವಳಿಗಾಗಿ ಮನೆ ಮಠ,ಊರು ,ಹೆತ್ತವರ ಆಸೆಗಳನ್ನು ,ಅಕ್ಕತಮ್ಮ ,ಅಜ್ಜಾಜ್ಜಿ ಯಾರಿಗಿಂತ ಅವಳೇ ಮುಖ್ಯ ವಾಗಿ ಜೀವ ಸವೆಸಲು ಸಿದ್ದ ( ಕೆಲವು ಬದಲಾವಣೆಯೊಂದಿಗೆ ಹುಡುಗಿಯರಿಗೂ ಅನ್ವಯಿಸುತ್ತೆ).
ಗುಲಾಬಿ ಕೀಳುವಾಗಗಿದ್ದ ಧೈರ್ಯ ಕೊಡಲು ಹೋದಾಗ ಇಲ್ಲದೆ ಕನ್ನಡಿಯ ಮುಂದೆ ರಿಹರ್ಸಲ್ ಮಾಡಿದರು , ಎಷ್ಟೇ ಧೈರ್ಯವಂತನಾಗಿದ್ದರು ,ಮಾತುಗಾರನಾಗಿದ್ದರು ಹುಡುಗಿಯ ಮುಂದೆ ಮಾತಾಡಲು ನಿಂತರೆ ಬ ಬೆ ಬೇ !!!ಹೆದರಿ ಖಾಲಿ ಹಾಳೆ (blank letter) ಮಡಚಿ ಕೊಟ್ಟಗಾ ಅವಳು ನೋಡದ ಹೋದಾಗ ಸಾವಿರ ಕನಸುಗಳು ಹುಟ್ಟುವ ಮೊದಲೇ ಸತ್ತು ಹೋಗುತ್ತವೆ .
ಅವಳ ಹೆಸರು ಕೈ ಮೇಲೆ ಹಚ್ಚೆ ಯಾಗಿ ಕಾಣಿಸಿಕೊಳ್ಳುತ್ತದೆ .

co-education ನಲ್ಲಿ ಕಲಿಯದ ಹುಡುಗಿಯರಲ್ಲಿ by chance ಯಾವುದೊ ಹುಡುಗ ಮಾತಾಡಿಸಿದರೆ ಪುಳುಕಿತರಾಗಿ ಆ ಕ್ಷಣ ನೆನಪಿನಲ್ಲಿಟ್ಟು ಹುಡುಗನ ಆಕರ್ಷಣೆ ಗೆ ಒಳಗಾಗಿ ಅವನ ಗಮನ ಸೆಳೆಸಲು ಏನೆಲ್ಲಾ ಸಾಹಸಪಟ್ಟು ಕೊನೆಗೆ beauty parlour ನ ಮೊರೆ ಹೋಗಿ bleach ಮಾಡಿಸಿಕೊಂಡಾಗ note book ನ ಕೊನೆಯ ಪುಟದಲ್ಲಿದ ಅವನ ಹೆಸರು ಅಣುಕಿಸುತ್ತಿರುತ್ತದೆ


Degreeಯಲ್ಲಿನ love ಗಳು ಸ್ವಲ್ಪ long period ಅಂದ್ರೆ 3--4 ವರ್ಷದಗಿರೊತ್ತೆ
ಕೇವಲ ಹುಡುಗ ಅಥವಾ ಹುಡುಗಿಯರಿಂದ ಏನು ಆಗದು ,lab,project , seminar,sport ,cultural activity ಗಳಲ್ಲಿ ಸಹಕಾರ ಬೇಕೇಬೇಕು .

ಹದಿವಯಸ್ಸು ದಾಟಿರುವುದರಿಂದಲೋ ,ಒತ್ತಡ ಕಡಿಮೆಯಿರುವುದರಿಂದಲೋ ,ಧೈಹಿಕ &ಮಾನಸಿಕದಲ್ಲಾದ ಬದಲಾವಣೆಯಿಂದಲೋ ಆಕರ್ಷಣೆಯಾಗಿ ತುಸುನಗೆ ಮಾತುಗಳಿಂದ ಪರಿಚಯವಾಗಿ ಮುಕ್ತವಾಗಿ 
ಮಾತಾಡಲು ,ಭಾವನೆಗಳನ್ನು ಹಂಚಿಕೊಳ್ಳಲು , ಸಹಾಯ ಮಾಡಿಕೊಳ್ಳಲು ,ನೋಡಲು ,ಸರಿಯಾಗಿ ಅರ್ಥ ಮಾಡಿಕೊಳ್ಳು ವುದರಿಂದ ಆರಂಭವಾಗಿ ,ಮುಂದಿನ life partnerನ ಕನಸುಕಾಣುತ್ತ ಎಲ್ಲೋ ಗೊತಿಲ್ಲದೆ ಕಳೆದು ಹೋಗಿರುತ್ತಾರೆ.

ಕಣ್ಣಲ್ಲಿ ಸಾವಿರ ನದಿಗಳ ಕನಸು ನಗುವುದು ಮಾತಾಡುವುದು ಕಣ್ಣಲ್ಲೇ ,

ಅವನು ಬಾರದ ದಿನ ಅವಳಿಗೆ ಹೇಳಿಕೊಳ್ಳಲಾಗದ ಹಿಂಸೆ ,ಅವನ ಖಾಲಿ ಕುರ್ಚಿ ,ಟೇಬಲ್ ಗಳ ಶೂನ್ಯ ಅವಳನ್ನು ತಿಂದು ಹಾಕುತ್ತದೆ ,ಏನೋ ಕಳೆದುಕೊಂಡ ಚಡಪಡಿಕೆ ಮತ್ತೆ ಮತ್ತೆ ಅಲ್ಲೇ ನೋಡುತಿರುತ್ತಾಳೆ .
ಕೆಲವೊಮ್ಮೆ by chance ಹಾಕಿದ ಬಂದ dress ನ colour ಒಂದೇ ಆದರಂತೂ ಆ ದಿನ ಫುಲ್ ಕುಶ್ ...
ಮಳೆಗಾಲದಲ್ಲಿ ತುಂಬಿ ನಿರಂತರವಾಗಿ ಜುಳು ಜುಳು ಹರಿವ ನದಿಗಳಂತೆ ಮಾತುಗಳು ಅಡೆ ತಡೆ ಇಲ್ಲದೆ mobile ನಲ್ಲಿ ಸಾಗುತ್ತವೆ.
girlfriend ಇಲ್ಲದ ಹುಡುಗ handsome & ಒಳ್ಳೆಯವನಾಗಿದ್ದು ಎಲ್ಲರನ್ನು ಮಾತಾಡಿಸಿದರಂತು ಅವನ photo ಇಲ್ಲದ ಹುಡುಗಿಯರ hostel room ಗಳಿಲ್ಲ ,unknown calls ,sms ಗಳು ಅವನ mobile ನಲ್ಲಿ ಯಾವಾಗಲು ರಾರಾಜಿಸುತ್ತಿರುತ್ತವೆ .

ಹುಡುಗಿ ಬೇರೆ ಧರ್ಮದವರನ್ನು ಪ್ರೀತಿಸುತಿದ್ದರೆ ಸಹೋದರರೋ ನೆಂಟರೋ ಹೇಳುವುದು "ಮದುವೆ ಮಾಡಿಕೊಂಡೆ ಅನ್ನೋದೊಂದೇ ಅಲ್ಲ,ನಿನ್ನ ಹೊಟ್ಟೆಲಿ ಹುಟ್ಟುವ ಮಗುವೋ ಅದರ ಮಗುವೋ ಯಾವುದೊ ಒಂದು ತಲೆಮಾರಿನ ಮಗು ನಮ್ಮ ದೇವಸ್ಥಾನಗಳನ್ನು ಒಡೆದು ನಾಶಮಾಡಿ ಮಸಿದಿ ,ಚರ್ಚ್ ಗಳನ್ನೂ ಹುಟ್ಟಿ ಹಾಕೊತ್ತೆ "

ಕದ್ದು ಮುಚ್ಚಿ ನಡೆವ love storyಗಳು ಮನೆಯವರಿಗೆ ಹೆದರಿ ಸಾವಿರ ಕನಸುಗಳು ಹುಟ್ಟುವ ಮೊದಲೇ ಸತ್ತು ಹೋಗುತ್ತವೆ .







ಮನದಲಿದ್ದ ಪ್ರೀತಿಯನ್ನು ಹೇಳಲಾಗದೆ ಎಲ್ಲೋ ನೋವನ್ನು ಅನುಭವಿಸಿ ಕೊನೆಗೆ ದೇವರಲ್ಲಿ ಹರಕೆ ಹೊತ್ತು ತಪ್ಪು ಮಾಡಿಬಿಟ್ಟೆ ಅವಳ /ನ ಪ್ರೀತಿನ ಒಪ್ಕೊಬೇಕಿತ್ತು ಎಂದು ಉಸಿರಿಡಿ ಕೊರಗಿ ಹುಟ್ಟಿಸಿದ ಮಗುಗೆ ಅವನ/ಳ ಹೆಸರಿಟ್ಟು, ಕೆಲವೊಮ್ಮೆ ಕಣ್ಣಿರು ಸುಖದ ಸಂಕೇತವಾದರೆ ನಗು ದುಃಖದಾಗಿರೊತ್ತೆ.

ಪ್ರೀತಿಯಲ್ಲಿ ಗೆದ್ದರೆ ಮುಂದೆ ಹೆಂಡತಿಯಾಗಿ LIC bond ,ಮನೆ bank a /c ಗೆ ನಾಮಿನಿಯಾಗಿ ,

ಇನ್ನು ಹುಡುಗಿ ಕೈಕೊಟ್ಟು ಬೇರೆಯವನನ್ನು ಮದುವೆಯಾಗ ಹೊರಟರೆ 
Attraction ನ love ಅಂದುಕೊಂಡಿದ್ದೆ ,ಆದರೆ love ಗೂ life ಗೂ ಇರೊ spelling ವ್ಯತ್ಯಾಸ ಗೊತ್ತಾಗತ್ತಿದೆ ,  wedding card ಹೆಸರನ್ನು Guest list ಲಿ ಬರೆದಾಗ   love failure ಆದ ಹುಡುಗ patho song ಗೆ ಮೊರೆಯಾಗಿ ಗಡ್ಡ ಮೀಸೆ ತಲೆಕೂದಲು ಬಿಟ್ಟು "ಯಾರಿಗೆ ಬೇಕು ಈ ಲೋಕ ಹಾಡನ್ನು ಹಾಡುತ್ತ

"ಯಾರ ಯಾರದೋ lover ಗಳನ್ನು ಯಾರೋ ಮದುವೆ ಆಗುತ್ತಾರೆ" ಕೊನೆಗೆ atleast ಕರೆದಿದ್ದರೆ wish ಮಡಿ ಬರ್ತಿದ್ದೆ ಯಾರಿಗೆ ಹೇಳೋಣ ನಮ್ಮ problemಮ್ಮು ..

ಅಂಗೈ ಮೇಲಿನ ಅವಳ ಹೆಸರಿನ ಹಚ್ಚೆ ಬದುಕಿಡೀ ಉಸಿರಿನಂತೆ ಜೊತೆಯಾಗಿ ಮತ್ತೆ ಮತ್ತೆ ಅಣುಕಿಸುತ್ತ E -mail ನ password ಆಗಿ ಬಿಡುತ್ತದೆ



ಪ್ರೀತಿ ಅಂದರೆ ಬರೀ ಕ್ಷಣಿಕ ಆಕರ್ಷಣೆಯಲ್ಲ .

ದೇಹಕ್ಕೆ ಸಾವು , ಆತ್ಮ -ಪ್ರೀತಿಗಲ್ಲ
ಕಳೆದುಹೋದ purse(wallet ) ಕೂಡ ಕೆಲವೊಮ್ಮೆ ಸಿಗೋತ್ತೆ ಆದರೆ ಕಳೆದ ಮನಸ್ಸು ಸಿಗುವುದಿಲ್ಲ

Thursday, February 14, 2013

ಮನದ ಮರೆಯಲಿ ಭೂತ

"ಶ್ರೀ ಕೃಷ್ಣನು ಆಯುಧ  ಹಿಡಿದಿದ್ದೇ  ಆದರೆ ಮಹಾಭಾರತದ ಯುದ್ದ  ಕೆಲವೇ ಸೆಕೆಂಡಿನಲ್ಲಿ ಮುಗಿಯುತ್ತಿತು.ಅರ್ಜುನನಿಗೆ ಗೀತೋಪದೇಶವಾಗುತಿತ್ತೆ ???".

ಆತ್ಮಕ್ಕೆ ಸಾವಿಲ್ಲ ಭೌತಿಕ ದೇಹವು ಒಂದು ಕಲ್ಮಶ.
ದೇಹ ಉಡುಪನ್ನು ಬದಲಿಸಿದಂತೆ, ಆತ್ಮವು ದೇಹ ಬದಲಾಯಿಸುತ್ತದೆ ..ಹೀಗಿದ್ದೂ ಜನ ಕೊಲೆ, ಮೋಸ, ಸುಲಿಗೆ  ಹಣವನ್ನು ಮಾಡಲು ಹವಣಿಸುತ್ತಾರೆ.
ಹೋಗುವಾಗ ಏನು ತೆಗೆದುಕೊಂಡು ಹೋಗುತ್ತಾರೆ ???
ಅಂತಹ  ಪವಿತ್ರ ಆತ್ಮವನ್ನು ಕಲ್ಮಶವನ್ನಾಗಿ  ಮಾಡುತ್ತಾರೆ ,ಕೆಟ್ಟದಾಗಿ ನಡೆಸುತ್ತಾರೆ ...
ಅಂಥದಕ್ಕೆ ಮುಕ್ತಿ ಇದೆಯೇ ???

ಅವನು ಆಡಿದ ಮಾತುಗಳು ನಿಜಕ್ಕೂ ಮಣಭಾರವಿತ್ತು ..
ಆಧ್ಯಾತ್ಮಕ್ಕೆ ಹತ್ತಿರವಿತ್ತು..

                                    *****************************************************************************

ಆಗ ನನಗೆ ಶಿವಮೊಗ್ಗೆ ಹೊಸತು ... ಸಂಜೆ 4.30 ರ ಶಿಕಾರಿಪುರ 'ಶ್ರೀ ಗಜಾನನ ಬಸ್ಸಿಗೆ ಹೋಗುತಿದ್ದೆ. ನಮ್ಮ ಕರಾವಳಿಯಲ್ಲಿ ಏನಿದ್ದರು ಮುಂಗಾರಿನ ಆರ್ಭಟ ಜಾಸ್ತಿ ,ಹಿಂಗಾರು ಕಡಿಮೆ.ಶಿವಮೊಗ್ಗೆಯಲ್ಲಿ ಹಿಂಗಾರು ಮಳೆ ಜಾಸ್ತಿ  ಮುಂಗಾರಿಗಿಂತ.
ಯಾವಾಗಲು ತುಂಬಿ ತುಳುಕುವ ಗಜಾನನ ಬಸ್ ನಲ್ಲಿ  ಸೀಟ್ ಸಿಗುವುದು  ಎಂದರೆ ರಾಜಕೀಯದಲ್ಲಿ ಟಿಕೆಟ್ ಸಿಕಂತೆ .
ಸೀಟ್ ಸಿಗುವುದು ಏನಿದ್ದರು ದೀವಳ್ಳಿ ,ಸಂತೆಗುಳಿ ,ಬಡಾಳದಲ್ಲಿಯೇ. 
private bus ಅಂದಮೇಲೆ  high school ನಲ್ಲಿ ಕಲಿಸಿದ  ಅಣ್ಣಯ್ಯ ಮಾಸ್ತರು  ಯಾವಾಗಲು ಹೇಳುತಿದ್ದ ಹಾಗೆ ಸ್ಪೀಡಿಗೆ  ಹೆಸರುವಾಸಿ.
ಸಿದ್ದಾಪುರ ಮಾರ್ಗದ ಎಲ್ಲ ಬಸ್ ಗಳಿಗೂ ತುಸು ವಿಶ್ರಾಂತಿ ಸಿಗುವುದು ಬಡಾಳ ಮಾಸ್ತಿಮನೆಯ  ನಾಗರಾಜಣ್ಣ ನ ಚಾ ಅಂಗಡಿಯ ಮುಂದೆ .
ಅವನು ಮಾಡಿದ ಚಾ ಜೊತೆಗಿನ  ಈರುಳ್ಳಿ ಬಜೆ   ಡ್ರೈವರ್ ಮತ್ತು ಜನರಿಗೂ ಹೊಸ ಹುರುಪನ್ನು ತರುತಿತ್ತು ...


ಶಿವಮೊಗ್ಗೆ ಬರಲು ಸಾಗರದಿಂದ ಪ್ರಕಾಶ್ ಟ್ರಾವೆಲ್ ಹತ್ತಿದೆ ಸಮಯ 8.30pm  ಆಸುಪಾಸು.
private busನವರು ಸೀಟಿ ಗಾಗಿ ಹೊಡೆದಾಡುವುದು ಮಾಮೂಲು .
ಯಾವ ಬಸ್ ಹತ್ತಿರ (time ಗೆ )ಇಲ್ಲದ ಕಾರಣ ಅಂತು ಇಂತೂ ಶಿವಮೊಗ್ಗೆಗೆ ಬರಲು ಮಳೆಯ ಸಿಂಚನ ಬೇರೆ .

ಬಸ್ ಸ್ಟ್ಯಾಂಡ್  ಮುಂದಿನ ಕಬ್ರಸ್ತಾನ್   ಹತ್ತಿರ ನಿದ್ದೆಯಲ್ಲಿದ  ಪ್ರಯಾಣಿಕರನ್ನು ಇಳಿಸುವಲ್ಲಿ ಬಸ್ಸಿನ ಕ್ಲೀನರನ ಆತುರ ,ಕೆಲವರು ಗೊಣಗುತ್ತ ಅರ್ಧಂಬರ್ಧ  ಒದ್ದೆಯಾಗುತ್ತ Bag ನಲ್ಲಿರುವ ಛತ್ರಿ ತೆಗೆಯುತ್ತಿದ್ದರೆ, ನಾನು ಇಳಿದು ಭಾರವಾದ Bagನಿಂದ ಕೊಡೆ ತೆಗೆಯುತ್ತ ಪೆಟ್ರೋಲ್ ಬಂಕ್  ಹತ್ತಿರ ಇದ್ದ ಬೆಂಗಳೂರು ಬಸ್ ನವರಿಂದ ತಪ್ಪಿಸಿಕೊಂಡು BH roadನಲ್ಲಿ ನಡೆಯಲು ಪ್ರಾರಂಭಿಸಿದೆ,
ಒಂದೂವರೆ  km ದೂರ ಇರುವ ರೂಂ ನೆಡೆಗೆ .


ಸಮಯ ಅಜಮಾಸು ರಾತಿ 10.30. ರಾತ್ರಿ ಹಗಲೆನ್ನದೆ ಜನರು ಓಡಾಡುವ BH road ನ ಅಕ್ಕಪಕ್ಕದ ಅಂಗಡಿಗಳ ಸೂರಿನ ಅಡಿಯಲ್ಲಿ  ಮಳೆಯಿಂದ ರಕ್ಷಣೆ ಪಡೆಯಲು ಓಡುತಿದ್ದರು .
ಹೋಟೆಲ್ ಪಂಚಮಿ ದಾಟಿ ತುಸು ದೂರ ನಡೆಯಲು ಒಬ್ಬ ಮದ್ಯ ವಯಸ್ಸಿನ ಸುಮಾರು  55ರ  5.2 ಅಡಿ ಆಸುಪಾಸಿನ ಮುಂಭಾಗದ ತಲೆಕೂದಲು ಇಲ್ಲದ, ಕಪ್ಪಗಿನ ಗಂಡಸು ತುಸು ದೂರ  ರೈಲ್ವೆ ಸ್ಟೇಷನ್ ಗೆ linಕೊಡೆಯಲ್ಲಿ ಡ್ರಾಪ್ ಕೇಳಿದ

Black pant ,Brown shirt,shoes ಕೈಯಲ್ಲಿ Bag(laptop bag  ) ಹಿಡಿದಿದ್ದ  .
 ಬೆಂಗಳೂರು ರೈಲ್ವೆ ಗೆ ಹೋಗುವುದಾಗಿ ಹೇಳಿದ .ನನಗೂ ರೈಲ್ವೆ ಸ್ಟೇಷನ್ ಮತ್ತು ಸಮಯ ಗೊತ್ತಿಲ್ಲದ ಕಾರಣ ಹೌದ ಅಂದೇ .
ಮೂಲತಃ ಶಿವಮೊಗ್ಗೆ ಆದರೆ ಬೆಂಗಳೂರಿನಲ್ಲಿ ಹೆಂಡತಿ ಮಕ್ಕಳು ಜೊತೆ ಇರುವುದಾಗಿ ಯಾವುದೋ  ಕೋರ್ಟ್ ಕೆಲಸಕ್ಕೆ ಬಂದಿದ್ದಾಗಿ ಹೇಳಿದ 
ಜಾಸ್ತಿ ತಲೆ ಕೆಡಿಸಿಕೊಳ್ಳದೆ ಅವನ ಮಾತಿಗೆ ತಲೆ ಕುಣಿಸುತ್ತಾ Royal arcade ಹತ್ತಿರ ಬಂದಾಗ ಶಿವಮೊಗ್ಗ  ಈಗ ಮೊದಲಿನ೦ತೆ ಇಲ್ಲ ತುಂಬಾ ಬದಲಾಗಿದೆ 
ಯಡಿಯೂರಪ್ಪ ಮುಖ್ಯ ಮಂತ್ರಿ ಆದ ನಂತರದಿಂದ LAND ಬೆಲೆ ಗಗನಕ್ಕೆ ಏರಿದೆ
ಎಲ್ಲರು real estate ಉದ್ಯಮಿಗಳೇ!!


ಮಾಡರ್ನ್  ಟಾಕೀಸು ದಾಟುತ್ತ ಹೊರಗೆ ಹಾಕಿದ ಜರಾಸಂಧ ಸಿನೆಮಾದ 
 ಪೋಸ್ಟರ್ ನೋಡಿ ಮಹಾಭಾರತ  ಬಗ್ಗೆ ಹೇಳಲು ಆರಂಭಿಸಿದ .
ಅಮೀರಮ್ಮ ಸರ್ಕಲ್ ದಾಟಿ  ನೆಹರು ರಸ್ತೆಗೆ ಬಂದೆವು .

ಅವನಾಡುತ್ತಿದ್ದ  ಮಾತು ಸತ್ಯಕೆ ಹತ್ತಿರವಿದ್ದ  ಕಾರಣ ಸರಿ ಎನಿಸಿತು .

ಮಾತಾಡುತ್ತ ನಡೆದರೆ ಆಯಾಸ ಕಡಿಮೆ .

ಆ ನೆಹರು ರಸ್ತೆಯಲ್ಲಿ ನಮ್ಮಿಬರ ಬಿಟ್ಟು ಅಲ್ಲಲಿ ಸಿಗುವ ಆಭರಣದ ಅಂಗಡಿ ರಾತ್ರಿ ಕಾವಲುಗಾರರ ಹೊರತಾಗಿ ಯಾರು ಇರಲಿಲ್ಲ .
ಹೋಟೆಲ್ woodland ದಾಟಿ ಗೋಪಿ ಸರ್ಕಲ್ ಗೆ ಬಂದೆವು .
.
ನನ್ನ jeans pantನ ಎಡ ಕಿಸೆಯಲ್ಲಿದ mobile ringಆಗಲು ಆರಂಭಿಸಿತು .
ಆಯಿ (ಅಮ್ಮ ) phone ಮಾಡಿ ರೂಂಗೆ ಹೋಗಿ ಮುಟ್ಟಿದೆಯಾ ಎಂದು ಕೇಳಲು ,ಇಲ್ಲ  on the way ಹತ್ತಿರ ಹೋಗುತ್ತಾ ಇದ್ದೆ  ಮುಟ್ಟಿದ ಮೇಲೆ call ಮಾಡ್ತೆ .ಹೇಳಿ ಬಲಭಾಗಕ್ಕೆ ಇದ್ದ ದಾರಿಹೋಕನೆಡೆಗೆ ತಿರುಗಿ ನೋಡಿದೆ .

ಗೋಪಿ ಸರ್ಕಲ್ ಎಂದರೆ 5-6 ರಸ್ತೆ ಸೇರುವ ಸ್ಥಳ .ದುರ್ಗಿಗುಡಿ ,ಗಾರ್ಡನ್ ಏರಿಯ ,ಮಾರ್ಕೆಟ್ ,ಗಾಂಧಿ ಬಜಾರ್ ,ರೈಲ್ವೆ ಸ್ಟೇಷನ್, ಕೋರ್ಟ್ ಗೆ ಹೋಗಬಹುದು .
high mast light ನ ಬೆಳಕು ಸುತ್ತಲಿನ ಪ್ರದೇಶವನ್ನು ದೂರದವರೆಗೆ ಸ್ಪಷ್ಟವಾಗಿ ಆವರಿಸಿತ್ತು .

ಅವನು ಅಲ್ಲಿ ಇರಲಿಲ್ಲ ಮಳೆ ಸುರಿಯುತಿತ್ತು .
ಹಿಂದೆ ತಿರುಗಿ ನೋಡಿದೆ ,ಅಕ್ಕಪಕ್ಕದ ರಸ್ತೆ ಗಳಲ್ಲೂ ನೋಡಿದೆ ಹತ್ತಿರ ಎಲ್ಲೂ ಕಾಣಲಿಲ್ಲ .ಅಂಗಡಿಗಳ ಸೂರಿನಲ್ಲೂ  ಇರಲಿಲ್ಲ ..
ತಕ್ಷಣ ಕಳ್ಳನಾಗಿ  wallet(ಪರ್ಸ್ )ಹೊಡೆದಿರಬಹುದು ಎಂದೆಣಿಸಿ ಕಿಸೆಯ ಮುಟ್ಟಿ  ನೋಡಿದೆ ಪರ್ಸ ಅದರ ಜಾಗದಲ್ಲೇ ಇತ್ತು .bracelet,watch ಎಲ್ಲವು ಸರಿಯಾಗಿ ಇತ್ತು.
ಅವನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ  ರೂಂ ಗೆ ಹೋಗಿ ಆಯಿಗೆ call ಮಾಡಿ ಮಲಗಿದೆ .ಬೆಳಿಗ್ಗೆ ಎದ್ದು college ಗೆ ಹೋಗಿದ್ದರಿಂದ 'ಅವನ' ವಿಷಯ  ಮರೆತು ಹೋಯಿತು.

ನಿಜವಾಗಿ ತಲೆ ಕೆಟ್ಟಿದ್ದು  ಸುಮಾರು 6 ತಿಂಗಳ ನಂತರ ರೂಂ ownerನ ಗೆಳೆಯನನ್ನು ನೋಡಿದಾಗ. ಓನರ್ ಆಂಟಿಯ  ಹತ್ತಿರ ಕೇಳಿದಾಗ uncleನ friend ಅವರು ದಾವಣಗೆರೆಯಿಂದ 1st time  ಬಂದಿದ್ದಾರೆ ಅಂದಾಗ ನಂಗೆ ಶಾಕ್. ಆಂಟಿಗೆ ನಡೆದ ವಿಷಯ ಹೇಳಿದಾಗ " ಜಾಗಕ್ಕೆ ಹೊಸಬರಿಗೆ 'ಅವು' ಬರುತ್ತವೆ. ನಿನ್ ಅಮ್ಮ ನಿನನ್ನು ಕಾಪಾಡಿತು & ನೀನು ಹೆದರಲಿಲ್ಲ ಓಡಿಹೋಯಿತು ಎಂದಳು ".
ಆ ದಿನ ಆಸುಪಾಸಿನ ಇತರೆ ಬಾಡಿಗೆ ಮನೆಯವರು ,uncle ಮಗಳು ಎಲ್ಲ ವಿಷಯದ ಬಗ್ಗೆ ಕೇಳುವವರೇ.

ಆದರ ನಂತರ ತುಂಬಾ ಸಲ  ಇನ್ನೂ  ತಡವಾಗಿ  ಮಧ್ಯ ರಾತ್ರಿಗೂ ಕೆಲವೊಮ್ಮೆ ಹೋಗುತಿದ್ದೆ ...
ನಂತರ ನಾನು ಅವಲೋಕಿಸಿದಾಗ Bangalore train  ಸಮಯ 10.10pm ,ಅಂದು ಭಾನುವಾರ ಕೋರ್ಟ್ ಎಲ್ಲಿ ತೆರೆದಿರುತ್ತೆ?
ಗೋಪಿ ಸರ್ಕಲ್ ಇಂದ ರೈಲ್ವೆ ಸ್ಟೇಷನ್ ಗೆ ಬಲಗಡೆ ನೇರ ಸುಮಾರು 3 km ಹೋಗಬೇಕು ..

ಕೊನೆಗೆ ನನಲ್ಲಿ ಮೂಡಿದ ಪ್ರಶ್ನೆ 
ಆ ಆಸಾಮಿ ಯಾರು ???? ಅದ್ಹೇಗೆ ಸೆಕೆಂಡುಗಳಲ್ಲಿ ಮಾಯವಾದ ??
ಕೆಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ ಅಲ್ಲ್ಲವೇ ?