ನಿನ್ನೆ ಎಂಬುದರ ನೆನಪು ಅಳಿಸಿ
ನಾಳೆ ಉದಯದ ಕನಸು ಉಳಿಸಿ
ಇಂದಿನ ದಿನದ ಅರ್ಥವ ತಿಳಿದು
ಕಲಿಕೆಯ ಪಥದಲಿ ಸಾಗುತಿದೆ ಬದುಕು ....
ಹಸಿರಾಗಿದೆ ಮನಸು ಭತ್ತದ ಸಸಿಗಳಂತೆ
ನಿರ್ಮಲವಾಗಿದೆ ಹರಿವ ನೀರಿನಂತೆ
ದೃಡವಿದೆ ಬೆಟ್ಟದ ಕಪ್ಪು ಬಂಡೆಯಂತೆ
ಹಳೆಯ ನೆನಪುಗಳು ನೋವಾಗಿ ಚುಚ್ಚುತಿದೆ ...
ಸೊರಗಿದ ಮನಕೆ ಉಸಿರಾಗಿ ಬಾ ಬೆಳಕೆ
ಕಾಣದ ದಾರಿ ತೋರುವ ದೀಪವಾಗಿ
ಕತ್ತಲೆಯಿಂದ ಬೆಳಕಿನೆಡೆ ಸಾಗಲಿ ಬದುಕು
ನಕ್ಷತ್ರದಂತೆ ಅಲ್ಲದಿದ್ದರೂ ಮಿಣುಕು ಹುಳದಂತೆ ಮಿನುಗಲಿ ಬದುಕು
ಬಾ ಬೆಳಕೇ ಒಮ್ಮೆ ಬಾಳದೀವಿಗೆಯಾಗಿ
ನಾಳೆ ಉದಯದ ಕನಸು ಉಳಿಸಿ
ಇಂದಿನ ದಿನದ ಅರ್ಥವ ತಿಳಿದು
ಕಲಿಕೆಯ ಪಥದಲಿ ಸಾಗುತಿದೆ ಬದುಕು ....
ಹಸಿರಾಗಿದೆ ಮನಸು ಭತ್ತದ ಸಸಿಗಳಂತೆ
ನಿರ್ಮಲವಾಗಿದೆ ಹರಿವ ನೀರಿನಂತೆ
ದೃಡವಿದೆ ಬೆಟ್ಟದ ಕಪ್ಪು ಬಂಡೆಯಂತೆ
ಹಳೆಯ ನೆನಪುಗಳು ನೋವಾಗಿ ಚುಚ್ಚುತಿದೆ ...
ಸೊರಗಿದ ಮನಕೆ ಉಸಿರಾಗಿ ಬಾ ಬೆಳಕೆ
ಕಾಣದ ದಾರಿ ತೋರುವ ದೀಪವಾಗಿ
ಕತ್ತಲೆಯಿಂದ ಬೆಳಕಿನೆಡೆ ಸಾಗಲಿ ಬದುಕು
ನಕ್ಷತ್ರದಂತೆ ಅಲ್ಲದಿದ್ದರೂ ಮಿಣುಕು ಹುಳದಂತೆ ಮಿನುಗಲಿ ಬದುಕು
ಬಾ ಬೆಳಕೇ ಒಮ್ಮೆ ಬಾಳದೀವಿಗೆಯಾಗಿ
No comments:
Post a Comment