Thursday, February 14, 2013

ಮನದ ಮರೆಯಲಿ ಭೂತ

"ಶ್ರೀ ಕೃಷ್ಣನು ಆಯುಧ  ಹಿಡಿದಿದ್ದೇ  ಆದರೆ ಮಹಾಭಾರತದ ಯುದ್ದ  ಕೆಲವೇ ಸೆಕೆಂಡಿನಲ್ಲಿ ಮುಗಿಯುತ್ತಿತು.ಅರ್ಜುನನಿಗೆ ಗೀತೋಪದೇಶವಾಗುತಿತ್ತೆ ???".

ಆತ್ಮಕ್ಕೆ ಸಾವಿಲ್ಲ ಭೌತಿಕ ದೇಹವು ಒಂದು ಕಲ್ಮಶ.
ದೇಹ ಉಡುಪನ್ನು ಬದಲಿಸಿದಂತೆ, ಆತ್ಮವು ದೇಹ ಬದಲಾಯಿಸುತ್ತದೆ ..ಹೀಗಿದ್ದೂ ಜನ ಕೊಲೆ, ಮೋಸ, ಸುಲಿಗೆ  ಹಣವನ್ನು ಮಾಡಲು ಹವಣಿಸುತ್ತಾರೆ.
ಹೋಗುವಾಗ ಏನು ತೆಗೆದುಕೊಂಡು ಹೋಗುತ್ತಾರೆ ???
ಅಂತಹ  ಪವಿತ್ರ ಆತ್ಮವನ್ನು ಕಲ್ಮಶವನ್ನಾಗಿ  ಮಾಡುತ್ತಾರೆ ,ಕೆಟ್ಟದಾಗಿ ನಡೆಸುತ್ತಾರೆ ...
ಅಂಥದಕ್ಕೆ ಮುಕ್ತಿ ಇದೆಯೇ ???

ಅವನು ಆಡಿದ ಮಾತುಗಳು ನಿಜಕ್ಕೂ ಮಣಭಾರವಿತ್ತು ..
ಆಧ್ಯಾತ್ಮಕ್ಕೆ ಹತ್ತಿರವಿತ್ತು..

                                    *****************************************************************************

ಆಗ ನನಗೆ ಶಿವಮೊಗ್ಗೆ ಹೊಸತು ... ಸಂಜೆ 4.30 ರ ಶಿಕಾರಿಪುರ 'ಶ್ರೀ ಗಜಾನನ ಬಸ್ಸಿಗೆ ಹೋಗುತಿದ್ದೆ. ನಮ್ಮ ಕರಾವಳಿಯಲ್ಲಿ ಏನಿದ್ದರು ಮುಂಗಾರಿನ ಆರ್ಭಟ ಜಾಸ್ತಿ ,ಹಿಂಗಾರು ಕಡಿಮೆ.ಶಿವಮೊಗ್ಗೆಯಲ್ಲಿ ಹಿಂಗಾರು ಮಳೆ ಜಾಸ್ತಿ  ಮುಂಗಾರಿಗಿಂತ.
ಯಾವಾಗಲು ತುಂಬಿ ತುಳುಕುವ ಗಜಾನನ ಬಸ್ ನಲ್ಲಿ  ಸೀಟ್ ಸಿಗುವುದು  ಎಂದರೆ ರಾಜಕೀಯದಲ್ಲಿ ಟಿಕೆಟ್ ಸಿಕಂತೆ .
ಸೀಟ್ ಸಿಗುವುದು ಏನಿದ್ದರು ದೀವಳ್ಳಿ ,ಸಂತೆಗುಳಿ ,ಬಡಾಳದಲ್ಲಿಯೇ. 
private bus ಅಂದಮೇಲೆ  high school ನಲ್ಲಿ ಕಲಿಸಿದ  ಅಣ್ಣಯ್ಯ ಮಾಸ್ತರು  ಯಾವಾಗಲು ಹೇಳುತಿದ್ದ ಹಾಗೆ ಸ್ಪೀಡಿಗೆ  ಹೆಸರುವಾಸಿ.
ಸಿದ್ದಾಪುರ ಮಾರ್ಗದ ಎಲ್ಲ ಬಸ್ ಗಳಿಗೂ ತುಸು ವಿಶ್ರಾಂತಿ ಸಿಗುವುದು ಬಡಾಳ ಮಾಸ್ತಿಮನೆಯ  ನಾಗರಾಜಣ್ಣ ನ ಚಾ ಅಂಗಡಿಯ ಮುಂದೆ .
ಅವನು ಮಾಡಿದ ಚಾ ಜೊತೆಗಿನ  ಈರುಳ್ಳಿ ಬಜೆ   ಡ್ರೈವರ್ ಮತ್ತು ಜನರಿಗೂ ಹೊಸ ಹುರುಪನ್ನು ತರುತಿತ್ತು ...


ಶಿವಮೊಗ್ಗೆ ಬರಲು ಸಾಗರದಿಂದ ಪ್ರಕಾಶ್ ಟ್ರಾವೆಲ್ ಹತ್ತಿದೆ ಸಮಯ 8.30pm  ಆಸುಪಾಸು.
private busನವರು ಸೀಟಿ ಗಾಗಿ ಹೊಡೆದಾಡುವುದು ಮಾಮೂಲು .
ಯಾವ ಬಸ್ ಹತ್ತಿರ (time ಗೆ )ಇಲ್ಲದ ಕಾರಣ ಅಂತು ಇಂತೂ ಶಿವಮೊಗ್ಗೆಗೆ ಬರಲು ಮಳೆಯ ಸಿಂಚನ ಬೇರೆ .

ಬಸ್ ಸ್ಟ್ಯಾಂಡ್  ಮುಂದಿನ ಕಬ್ರಸ್ತಾನ್   ಹತ್ತಿರ ನಿದ್ದೆಯಲ್ಲಿದ  ಪ್ರಯಾಣಿಕರನ್ನು ಇಳಿಸುವಲ್ಲಿ ಬಸ್ಸಿನ ಕ್ಲೀನರನ ಆತುರ ,ಕೆಲವರು ಗೊಣಗುತ್ತ ಅರ್ಧಂಬರ್ಧ  ಒದ್ದೆಯಾಗುತ್ತ Bag ನಲ್ಲಿರುವ ಛತ್ರಿ ತೆಗೆಯುತ್ತಿದ್ದರೆ, ನಾನು ಇಳಿದು ಭಾರವಾದ Bagನಿಂದ ಕೊಡೆ ತೆಗೆಯುತ್ತ ಪೆಟ್ರೋಲ್ ಬಂಕ್  ಹತ್ತಿರ ಇದ್ದ ಬೆಂಗಳೂರು ಬಸ್ ನವರಿಂದ ತಪ್ಪಿಸಿಕೊಂಡು BH roadನಲ್ಲಿ ನಡೆಯಲು ಪ್ರಾರಂಭಿಸಿದೆ,
ಒಂದೂವರೆ  km ದೂರ ಇರುವ ರೂಂ ನೆಡೆಗೆ .


ಸಮಯ ಅಜಮಾಸು ರಾತಿ 10.30. ರಾತ್ರಿ ಹಗಲೆನ್ನದೆ ಜನರು ಓಡಾಡುವ BH road ನ ಅಕ್ಕಪಕ್ಕದ ಅಂಗಡಿಗಳ ಸೂರಿನ ಅಡಿಯಲ್ಲಿ  ಮಳೆಯಿಂದ ರಕ್ಷಣೆ ಪಡೆಯಲು ಓಡುತಿದ್ದರು .
ಹೋಟೆಲ್ ಪಂಚಮಿ ದಾಟಿ ತುಸು ದೂರ ನಡೆಯಲು ಒಬ್ಬ ಮದ್ಯ ವಯಸ್ಸಿನ ಸುಮಾರು  55ರ  5.2 ಅಡಿ ಆಸುಪಾಸಿನ ಮುಂಭಾಗದ ತಲೆಕೂದಲು ಇಲ್ಲದ, ಕಪ್ಪಗಿನ ಗಂಡಸು ತುಸು ದೂರ  ರೈಲ್ವೆ ಸ್ಟೇಷನ್ ಗೆ linಕೊಡೆಯಲ್ಲಿ ಡ್ರಾಪ್ ಕೇಳಿದ

Black pant ,Brown shirt,shoes ಕೈಯಲ್ಲಿ Bag(laptop bag  ) ಹಿಡಿದಿದ್ದ  .
 ಬೆಂಗಳೂರು ರೈಲ್ವೆ ಗೆ ಹೋಗುವುದಾಗಿ ಹೇಳಿದ .ನನಗೂ ರೈಲ್ವೆ ಸ್ಟೇಷನ್ ಮತ್ತು ಸಮಯ ಗೊತ್ತಿಲ್ಲದ ಕಾರಣ ಹೌದ ಅಂದೇ .
ಮೂಲತಃ ಶಿವಮೊಗ್ಗೆ ಆದರೆ ಬೆಂಗಳೂರಿನಲ್ಲಿ ಹೆಂಡತಿ ಮಕ್ಕಳು ಜೊತೆ ಇರುವುದಾಗಿ ಯಾವುದೋ  ಕೋರ್ಟ್ ಕೆಲಸಕ್ಕೆ ಬಂದಿದ್ದಾಗಿ ಹೇಳಿದ 
ಜಾಸ್ತಿ ತಲೆ ಕೆಡಿಸಿಕೊಳ್ಳದೆ ಅವನ ಮಾತಿಗೆ ತಲೆ ಕುಣಿಸುತ್ತಾ Royal arcade ಹತ್ತಿರ ಬಂದಾಗ ಶಿವಮೊಗ್ಗ  ಈಗ ಮೊದಲಿನ೦ತೆ ಇಲ್ಲ ತುಂಬಾ ಬದಲಾಗಿದೆ 
ಯಡಿಯೂರಪ್ಪ ಮುಖ್ಯ ಮಂತ್ರಿ ಆದ ನಂತರದಿಂದ LAND ಬೆಲೆ ಗಗನಕ್ಕೆ ಏರಿದೆ
ಎಲ್ಲರು real estate ಉದ್ಯಮಿಗಳೇ!!


ಮಾಡರ್ನ್  ಟಾಕೀಸು ದಾಟುತ್ತ ಹೊರಗೆ ಹಾಕಿದ ಜರಾಸಂಧ ಸಿನೆಮಾದ 
 ಪೋಸ್ಟರ್ ನೋಡಿ ಮಹಾಭಾರತ  ಬಗ್ಗೆ ಹೇಳಲು ಆರಂಭಿಸಿದ .
ಅಮೀರಮ್ಮ ಸರ್ಕಲ್ ದಾಟಿ  ನೆಹರು ರಸ್ತೆಗೆ ಬಂದೆವು .

ಅವನಾಡುತ್ತಿದ್ದ  ಮಾತು ಸತ್ಯಕೆ ಹತ್ತಿರವಿದ್ದ  ಕಾರಣ ಸರಿ ಎನಿಸಿತು .

ಮಾತಾಡುತ್ತ ನಡೆದರೆ ಆಯಾಸ ಕಡಿಮೆ .

ಆ ನೆಹರು ರಸ್ತೆಯಲ್ಲಿ ನಮ್ಮಿಬರ ಬಿಟ್ಟು ಅಲ್ಲಲಿ ಸಿಗುವ ಆಭರಣದ ಅಂಗಡಿ ರಾತ್ರಿ ಕಾವಲುಗಾರರ ಹೊರತಾಗಿ ಯಾರು ಇರಲಿಲ್ಲ .
ಹೋಟೆಲ್ woodland ದಾಟಿ ಗೋಪಿ ಸರ್ಕಲ್ ಗೆ ಬಂದೆವು .
.
ನನ್ನ jeans pantನ ಎಡ ಕಿಸೆಯಲ್ಲಿದ mobile ringಆಗಲು ಆರಂಭಿಸಿತು .
ಆಯಿ (ಅಮ್ಮ ) phone ಮಾಡಿ ರೂಂಗೆ ಹೋಗಿ ಮುಟ್ಟಿದೆಯಾ ಎಂದು ಕೇಳಲು ,ಇಲ್ಲ  on the way ಹತ್ತಿರ ಹೋಗುತ್ತಾ ಇದ್ದೆ  ಮುಟ್ಟಿದ ಮೇಲೆ call ಮಾಡ್ತೆ .ಹೇಳಿ ಬಲಭಾಗಕ್ಕೆ ಇದ್ದ ದಾರಿಹೋಕನೆಡೆಗೆ ತಿರುಗಿ ನೋಡಿದೆ .

ಗೋಪಿ ಸರ್ಕಲ್ ಎಂದರೆ 5-6 ರಸ್ತೆ ಸೇರುವ ಸ್ಥಳ .ದುರ್ಗಿಗುಡಿ ,ಗಾರ್ಡನ್ ಏರಿಯ ,ಮಾರ್ಕೆಟ್ ,ಗಾಂಧಿ ಬಜಾರ್ ,ರೈಲ್ವೆ ಸ್ಟೇಷನ್, ಕೋರ್ಟ್ ಗೆ ಹೋಗಬಹುದು .
high mast light ನ ಬೆಳಕು ಸುತ್ತಲಿನ ಪ್ರದೇಶವನ್ನು ದೂರದವರೆಗೆ ಸ್ಪಷ್ಟವಾಗಿ ಆವರಿಸಿತ್ತು .

ಅವನು ಅಲ್ಲಿ ಇರಲಿಲ್ಲ ಮಳೆ ಸುರಿಯುತಿತ್ತು .
ಹಿಂದೆ ತಿರುಗಿ ನೋಡಿದೆ ,ಅಕ್ಕಪಕ್ಕದ ರಸ್ತೆ ಗಳಲ್ಲೂ ನೋಡಿದೆ ಹತ್ತಿರ ಎಲ್ಲೂ ಕಾಣಲಿಲ್ಲ .ಅಂಗಡಿಗಳ ಸೂರಿನಲ್ಲೂ  ಇರಲಿಲ್ಲ ..
ತಕ್ಷಣ ಕಳ್ಳನಾಗಿ  wallet(ಪರ್ಸ್ )ಹೊಡೆದಿರಬಹುದು ಎಂದೆಣಿಸಿ ಕಿಸೆಯ ಮುಟ್ಟಿ  ನೋಡಿದೆ ಪರ್ಸ ಅದರ ಜಾಗದಲ್ಲೇ ಇತ್ತು .bracelet,watch ಎಲ್ಲವು ಸರಿಯಾಗಿ ಇತ್ತು.
ಅವನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ  ರೂಂ ಗೆ ಹೋಗಿ ಆಯಿಗೆ call ಮಾಡಿ ಮಲಗಿದೆ .ಬೆಳಿಗ್ಗೆ ಎದ್ದು college ಗೆ ಹೋಗಿದ್ದರಿಂದ 'ಅವನ' ವಿಷಯ  ಮರೆತು ಹೋಯಿತು.

ನಿಜವಾಗಿ ತಲೆ ಕೆಟ್ಟಿದ್ದು  ಸುಮಾರು 6 ತಿಂಗಳ ನಂತರ ರೂಂ ownerನ ಗೆಳೆಯನನ್ನು ನೋಡಿದಾಗ. ಓನರ್ ಆಂಟಿಯ  ಹತ್ತಿರ ಕೇಳಿದಾಗ uncleನ friend ಅವರು ದಾವಣಗೆರೆಯಿಂದ 1st time  ಬಂದಿದ್ದಾರೆ ಅಂದಾಗ ನಂಗೆ ಶಾಕ್. ಆಂಟಿಗೆ ನಡೆದ ವಿಷಯ ಹೇಳಿದಾಗ " ಜಾಗಕ್ಕೆ ಹೊಸಬರಿಗೆ 'ಅವು' ಬರುತ್ತವೆ. ನಿನ್ ಅಮ್ಮ ನಿನನ್ನು ಕಾಪಾಡಿತು & ನೀನು ಹೆದರಲಿಲ್ಲ ಓಡಿಹೋಯಿತು ಎಂದಳು ".
ಆ ದಿನ ಆಸುಪಾಸಿನ ಇತರೆ ಬಾಡಿಗೆ ಮನೆಯವರು ,uncle ಮಗಳು ಎಲ್ಲ ವಿಷಯದ ಬಗ್ಗೆ ಕೇಳುವವರೇ.

ಆದರ ನಂತರ ತುಂಬಾ ಸಲ  ಇನ್ನೂ  ತಡವಾಗಿ  ಮಧ್ಯ ರಾತ್ರಿಗೂ ಕೆಲವೊಮ್ಮೆ ಹೋಗುತಿದ್ದೆ ...
ನಂತರ ನಾನು ಅವಲೋಕಿಸಿದಾಗ Bangalore train  ಸಮಯ 10.10pm ,ಅಂದು ಭಾನುವಾರ ಕೋರ್ಟ್ ಎಲ್ಲಿ ತೆರೆದಿರುತ್ತೆ?
ಗೋಪಿ ಸರ್ಕಲ್ ಇಂದ ರೈಲ್ವೆ ಸ್ಟೇಷನ್ ಗೆ ಬಲಗಡೆ ನೇರ ಸುಮಾರು 3 km ಹೋಗಬೇಕು ..

ಕೊನೆಗೆ ನನಲ್ಲಿ ಮೂಡಿದ ಪ್ರಶ್ನೆ 
ಆ ಆಸಾಮಿ ಯಾರು ???? ಅದ್ಹೇಗೆ ಸೆಕೆಂಡುಗಳಲ್ಲಿ ಮಾಯವಾದ ??
ಕೆಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ ಅಲ್ಲ್ಲವೇ ?

1 comment:

  1. First Of All Congrats... ಸ್ವಾರಸ್ಯವಾಗಿದೆ, I Wish ಆ ವ್ಯಕ್ತಿ ನಿನಗೆ ಪುನ್ಹ ಸಿಗಲಿ. ಮತ್ತೆ ಎಷ್ಟೋ ಸರಿ ಈಶ್ವರ ಮಾಡಕ್ ಆಗದೆ ಇದ್ದಿದ್ದೆಲ್ಲ ಗಣೇಶ ಮಾಡಿದ್ನಂತೆ, ನೀನ್ ನಿನ್ನ ಪಾಡಿಗೆ ಇರ್ತಿಯ ಅಂದ್ರು "ಅವು" ನಿನ್ನ ಬಿಡಲ್ಲ ಅಂತ್ ಆಯಿತು...

    ReplyDelete