ಬೆಳಿಗ್ಗೆ
4 ರ train ಬೇಗ ಎಳಲು ಆಗಲೆಂದು ರಾತ್ರೆ 12ಕ್ಕೆ railway stationಲಿ
settle ಆಗಿದ್ದೆ. ರಾತ್ರೆಯ railway stationನ ಗಡಿಬಿಡಿಯನ್ನು ನೋಡುತ್ತ ಆ
ಕಡೆ ಈಕಡೆ ಸುತ್ತಾಡಿ
ಸ್ವಲ್ಪ ಸಮಯ ಕಳೆದು
station master ಹತ್ತಿರ sleeper ticket ಬೇಕೆಂದಾಗ ಬೆಳಿಗ್ಗೆಯ ಯಾವ trainಗು sleeper ಇರಲ್ಲ
ಎಂದರು. ನಮ್ಮುರಿನ
train ಗೆsleeper ಇರೊತ್ತೆಯೆಂದಾಗ ಬೆಳ್ಳಿಗೆ ಹೊರಡುವ ಯಾವ train ಗು ಇರಲ್ಲ ಬೆಳ್ಳಿಗೆ ಹೊರಟು ರಾತ್ರೆ ತಲುಪುವುದಕ್ಕೆ ಮಾತ್ರ ಇರೊತ್ತೆಂದು ticket ನೀಡಿದರು.
ಬೋಗಿಯ ಒಳಗೆ
seatಗಳಲ್ಲಿ ಯಾರು ಇಲ್ಲದ ಕಾರಣ ಹೋಗಿ ನಿದ್ರಿಸಲು ಬಿದ್ದು ಕೊಂಡೆ.ದಿನದ ಸುಸ್ತಿಗೆ,ರಾತ್ರೆಯ ತಂಪಾದ ಗಾಳಿಗೆ ಆ
ಸೊಳ್ಳೆಗಳಿದ್ದ ಬೋಗಿಯೊಳಗು ನಿದ್ರೆಯ ಜೊಂಪು ಹತ್ತಿತ್ತು. ಮುಂಜಾನೆಯ ನಿದ್ರೆಯಲ್ಲಿ ರೈಲು ಹೊರಟಿದ್ದೆ ಗೊತ್ತಾಗದೆ
,ಯಾರೊ ಬಂದು ಎಬ್ಬಿಸಿದ ಹಾಗಾಗಿ ನೋಡಲು ಬೋಗಿ ತುಂಬಿ ತುಳುಕುತಿತ್ತು ,ಆಗಲೆ ಸಮಯ 7.30 ಆಸುಪಾಸಾಗಿತ್ತು. ಕುಳಿತುಕೊಳ್ಳಲು ಜಾಗ ನೀಡಿ ತುಕಡಿಸುತ್ತ ಜನರ ಮಾತು ಕೇಳುತಿದ್ದೆ, ಕಣ್ಣುಗಳನ್ನು ತೆರೆದಿರಲಿಲ್ಲ (only audio no video) ಅವರ ಮಾತುಗಳಲ್ಲೆ ಗೊತಾಯ್ತು ನಿತ್ಯ ಒಂದೇ ಬೋಗಿಯಲ್ಲಿ ಪ್ರಯಾಣಿಸುವವರು ಎಂದು...
ಎದುರುಗಡೆ
25-29 ವರ್ಷದ 5- 5.2 ಅಡಿ ಎತ್ತರ ಗೋದಿ ಬಣ್ಣದ ಹುಡುಗಿಯೊಬ್ಬಳು ಕಿಟಕಿಯ ಹೊರಗೆ ನೋಡುತ್ತ ಯಾವುದೊ ಯೋಚನೆಯಲ್ಲಿದ್ದಳು . ರೈಲು ಮುಂದಿನ stationಲಿ ನಿಂತಾಗ ಸ್ವಲ್ಪ ಗಾಳಿಯಾಡುತಿತ್ತು. ಟೀ, ಕಾಪಿ,ತಂಪುಪಾನಿ, ಇಡ್ಲಿ,ಮಸಾಲ ಮಂಡಕ್ಕಿ,ಮದ್ದುರ್ ವಡಾಗಳನ್ನು ಮಾರುವ ಹುಡುಗರು,ಹೂ,ಹಣ್ಣುಗಳ ಬುಟ್ಟಿಯನ್ನು ಹೊತ್ತ ಹೆಂಗಸರು ಜೋರಾಗಿ ಕೂಗುತ್ತಾ ಬರದಿಂದ ವ್ಯಾಪಾರ ಮಾಡುತಿದ್ದರು
ಎದುರಿಗಿದ್ದ ಹುಡುಗಿ ಒಂದೇ ಸಮನೆ ಅಳುತಿದ್ದಳು, ಸ್ವಲ್ಪ ಗಲಿಬಿಲಿಗೊಂಡೆ ಮುಖ ತೊಳೆದು ಸ್ವಲ್ಪ ಸಮಯ ಬಾಗಿಲಲ್ಲಿ ನಿಂತು ಬಂದೆ ಓಡುವ ರೈಲಿನ ವೇಗದಂತೆ ಅವಳ ಕಣ್ಣೀರಿನ
ನದಿ ಹರಿಯುತ್ತಲೆ ಇತ್ತು.ಎಚ್ಚೆತ್ತ ಅವಳು ಕಣ್ಣೀರು ತಡೆಯಲು ಕರವಸ್ತ್ರಕಾಗಿ ಹುಡುಕಾಡಿದಳು , ಹುಡುಕುತ್ತಲೆ ಇದ್ದಳು
.ಅದು ಮಾತ್ರ ಸಿಗಲಿಲ್ಲ ಇದೆಲ್ಲ ಒರೆ ಕಣ್ಣಲ್ಲಿ ನೋಡುತಿದ್ದೆ,bag ಇಂದ ಇನ್ನೊಂದು ಕರವಸ್ತ್ರವನ್ನು ತೆಗೆದು ಅವಳ ಮುಂದೆ ಹಿಡಿದಾಗ
no thanks ಅಂದಳು its
ok you can take it ಹೇಳಿ ನೀಡಿದೆ.ಕಣ್ಣಿರು ತಡೆದಷ್ಟು ತಡೆಗೋಡೆ ಒಡೆಯೊತ್ತೆ ಅಂತ ಯಾರೋ ಹೇಳಿದ್ದೊ ,ಓದಿದ್ದೊ ನೆನಪಾಗಿ ಕೊನೆಗು ನನ್ನ ಕರವಸ್ತ್ರ ಹುಡುಗಿಯ ಕಣ್ಣಿರು ಒರೆಸಿತು ಅನ್ನುವ ಸಮಾದಾನ.ಸ್ವಲ್ಪ ಸಮಯ ನಾನು ಗಣೇಶಯ್ಯನವರ ಪುಸ್ತಕದಲ್ಲಿ ತಲೆ ಹಾಕಿದೆ.
Thank you ,i am ಸುಹಾಸಿನಿ ಯೆಂದು ಕೈ ನೀಡುತ್ತ ಬೇಜಾರ್ ಆಗ್ಬೆದಿ ಎಂದಳು .ಅಳತಾ ಇದ್ದಿದ್ರಲ್ಲ ಅಂದಿದ್ದಕ್ಕೆ ಹೊರಗೆ ನೋಡುತ್ತ ತಲೆ ಆಡಿಸಿದಳು . ಗಡಿಬಿಡಿಯಲ್ಲಿ handkerchief
ಮರೆತು ಬಂದೆ ಕಾಣೊತ್ತೆ ,ಕಣ್ಣೊರೆಸುತ್ತ ಬಾರದ ನಗುವಿನಲಿ.
ಸುಮ್ನೆ ಮಾತಾಡಿಸಿ ನೋಡೊಣ ಅಂತ "ಅಳುತ್ತಾ ಇದ್ರಲ್ಲ ಯಾಕೆ" ದುಃಖಕ್ಕೆ ಜೊತೆ/ಹೇಳಿಕೊಂಡರೆ ಸಮಾದಾನ/ಕಡಿಮೆ ಅಗೊತ್ತೆ.
what you doing ಕೇಳಿದಾಗ doing research in Biology ಅಂದಳು. ಯಾವ ವಿಷಯದಲ್ಲಿ ಕೇಳಿದೆ
“plants pregnancy”
ನನ್ನ ಕುತುಹಲ
ಕಂಡು ಮುಂದುವರೆಸುತ್ತ " ನೈಸರ್ಗಿಕವಾಗಿ ಹೂವಿನ ಮೇಲೆ
ಬೀಳುವ ಸಾವಿರಾರು ಪರಾಗರೇಣುಗಳಲ್ಲಿ ಸ್ಪರ್ಧೆ ಉಂಟಾಗಿ ನಿರ್ದಿಷ್ಟ ,ಬಲಿಷ್ಠವಾಗಿರುವುದು ಮಾತ್ರ ಕೊನೆಗೆ
ಬೀಜೋತ್ಪಾದನೆಯಲ್ಲಿ ಪಾಲುದಾರರಾಗುತ್ತವೆ”.
ಬಾಳೆಗಿಡಗಳಲ್ಲಿ
pregnancy ಹೇಗೆ ನಡೆಯುತ್ತದೆ, ಗಡ್ಡೆಯಲ್ಲಿ ಮೊಳಕೆಯೊಡೆದು ಗಿಡವಾಗೊತ್ತೆ .
ಅಲ್ಲಿಯೂ pregnancy
ನಡೆಯುತ್ತವೆ ಗುರುತಿಸುವ ಕಣ್ಣು ನಮ್ಮದು ಆಗಿರಬೇಕು ಎಂದಳು.
ನಮ್ಮಂಗೆ ಸಸ್ಯಗಳಲ್ಲಿ ಬೀಜಗಳ ಬೆಳವಣಿಗೆ,ಪ್ರಸಾರಕ್ಕಾಗಿ
ಒಂದು ಹಣ್ಣಿನಲ್ಲಿಟ್ಟು ಬೆಳೆಸುವದು, ಆಹಾರ ಒದಗಿಸಿ ಕಾಪಾಡುವುದು ಹೆಣ್ಣಿನ ಭಾಗ. ಗಂಡು ಕೇವಲ ಒಂದು
ಪರಾಗರೇಣುವನ್ನು ಮಾತ್ರ ಕೊಡುತ್ತವೆ. ಹೆಣ್ಣಿಗೆ ಮಾತ್ರ ಸಮಾಜದಲ್ಲಿ ಕಷ್ಟ ಗಂಡಿಗೆ ಇರುವುದಿಲ್ಲ.
love failure ಆಯ್ತಾ ಕೇಳಿದಕ್ಕೆ shock ಆಗಿ ತಲೆ ಆಡಿಸುತ್ತ ಹೌದೆನ್ನುತ್ತಾ
“ PHD ಆರಂಭದ ದಿನಗಳಲ್ಲಿ ಮಾಹಿತಿ ಕಲೆಹಾಕುವಲ್ಲಿ ಸಂಗಾತಿಯಾಗಿ
ಸಹಾಯಕ್ಕೆ ಬಂದ senior ನ ಚತುರತೆ ,ಬುದ್ದಿವಂತಿಕೆ, ಅಂದ-ಚಂದಕ್ಕೆ ಮರುಳಾಗಿ ಕೇಲವೆ ದಿನಗಳಲ್ಲಿ ಸ್ನೇಹ
ಭಾವನಾತ್ಮಕ ಅನುಬಂಧವಾದ ಪ್ರೀತಿ-ಪ್ರೇಮವಾಗಿ ತಿರುಗಿ
ಅವನಿಗೆ ಸೋತುಹೋದೆ . ಅವನು ಯೆನು ಮಾಡಿದನೊ ಹೂವಿಗೆ ದುಂಬಿ Attract ಆದ ಹಾಗೆ ನಾನು
ಅವನಿಗೆ ಆಗಿದ್ದೆ.ಜೀವನ ಕಟ್ಟುವ ಎಷ್ಟೊ ಕನಸಿನ ಬೀಜಗಳು ಮೊದಲ ಮಳೆಯ ನೀರಿಗೆ ಚಿಗುರಿತ್ತು,
ಅವನು ಸಹಾಯಕ್ಕೆ ಬಂದಿದ್ದೆ ಮುಳುವಾಯಿತು phd ವಿಷಯದ ದಿಕ್ಕೆ
ಬದಲಾಗಿ ಸಂಗ್ರಹದ ಮಾಹಿತಿಯ ತಿರುಳನ್ನೆ ತಿರುಚಿಯಗಿತ್ತು.ಥೀಸೀಸ್ ಬರೆಯುವಾಗ ನಾನು ಮೋಸ ಹೊಗಿದ್ದೆ ಬೇಕಾದ ಮಾಹಿತಿಗೆ ಅವನ ಕೈ ಸೇರಿ ಅದಕ್ಕೆ ಹಣ ಪಡೆದಾಗಿತ್ತು.
ಹುಡುಗಿಯರು ಮಾತ್ರ ಕೈ ಕೊಡುತ್ತಾರೆ
ಅಂದುಕೊಂಡ್ರೆ ತಪ್ಪು ಹುಡುಗರು ಕೊಡುತ್ತಾರೆ. ಬೇರೆ
ಯಾವುದೊ ಹುಡುಗಿ ಜೊತೆ Engagement ಮಾಡಿಕೊಂಡಿದ್ದ , ಕೇಳಿದರೆ ನನ್ನ ಅಂತಸ್ತಿಗೆ ಸರಿಯಾದ ಜೋಡಿನಿನಲ್ಲ ಎಂದಿದ್ದ.
ಗಂಡುಗಳಲ್ಲಿ ಸೂಕ್ತವಾದವನ್ನು ಆರಿಸುವ
ಸಸ್ಯಗಳನ್ನು ಸಂಶೊಧನೆ ಮಾಡುತ್ತಾ personal life ನಲ್ಲಿ ಸೋತಿದ್ದೆ.”
ಒಂದೇ ಸಮನೆ ಅಳುತಿದ್ದಳು. ಯೆನು
ಮಾಡಬೇಕು ಅಂತ ಗೊತ್ತಾಗದೆ "ಕರೆದು ಕಚ್ಚಿಸಿ ಕೊಂಡ " ಹಾಗಾಯಿತು.
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕುದಿನದ ಈ ಬದುಕಿನಲಿ ||
- ಜಿ. ಎಸ್. ಶಿವರುದ್ರಪ್ಪ ಅವರ 4 lines ಗಳು ನೆನಪಿಗೆ
ಬಂದವು
ಸಾಂತ್ವಾನ ಮಾತುಗಳನ್ನು ಹುಡುಕುತಿದ್ದೆ
“
ನಾವು ಕೇವಲ Attarctionನನ್ನು Love ಅಂದುಕೊಳ್ಳುತ್ತೆವೆ,ಆದರೆ
Love & life ನಡುವಿನ Spelling ವ್ಯತ್ಯಾಸ ಆಮೇಲೆ ಗೊತ್ತಾಗೊತ್ತೆ . ಪ್ರೀತಿಯಲ್ಲಿದ್ದವರಿಗೆ ಒಳಿದೆಲ್ಲವು ಶೂನ್ಯ
,Attarction ಎಷ್ಟು ಪ್ರಬಲವಾಗಿರೊತ್ತೆ ಅಂದರೆ ದೊಡ್ದವರನ್ನಾಗಿ ಮಾಡಿದ ತಂದೆ-ತಾಯಿ , ಜೊತೆಗೆ ಬಂದ
ಅಕ್ಕ-ತಮ್ಮಂದಿರು ಶೂನ್ಯ.
ಪ್ರೀತಿ ಮಾಡೊದು ತಪಲ್ಲ ,ಅದು ಪ್ರಕೃತಿಯಲ್ಲಿನ
ಸಹಜ ಗುಣ, but Love is not a life its part of our life ಆಗಿರಬೇಕು. ಅದರಿಂದ ಹೆಚ್ಚು-ಕಡಿಮೆಯಾದ್ರೆ
ನಮಗೆ ನಷ್ಟ.ಮನೆಯವರಿಗು ಬೇಜಾರು...
ಸ್ವಲ್ಪ ಸಮಯವಷ್ಟೆ ಕಾಲ ಚಕ್ರದಲ್ಲಿ
ನೋವು ಮರೆಯಾಗೊತ್ತೆ
ಕನಸು ಕಾಣೊದು ಬೇರೆ ಕನಸು ಬಿಳುವುದು
ಬೇರೆ ಎಷ್ಟೋ ಸಲ ಕನಸು ಕಂಡಿರೋದು ನೀಜವಾಗಲ್ಲ ಕನಸು ಬಿದ್ದಿರೊದು ನೀಜವಾಗೊತ್ತೆ ಕನಸು ನಮ್ಮೊಳಗಿನ
ಪ್ರತಿಬಿಂಬ.
Mobile,e-mail,facebook,whatsapp
ಗಳು ಬಂದಿರುವದು ನಾವುಗಳು ಹತ್ತಿರವಾಗಲು..
Life is short ,live
it,enjoy it.
Life ಅನ್ನೊದು ನೀರಿನ ಮೇಲಿನ ಗುಳ್ಳೆ
ಇದಂಗೆ.
ನೋವು ಎಲ್ಲರಿಗು ಆಗೊತ್ತೆ, ನೋವು
ನಲಿವುಗಳ ನಡುವೆ ಇರುವುದೆ ಜೀವನ.Expectaion ಕಡಿಮೆ ಇದಷ್ಟು ನೋವಿನ ಆಳ ಕಡಿಮೆ.
ಶ್ರೀಕೃಷ್ಣ &ರಾಧೆ ನಡುವೆ ಲವ್
ಇದ್ರು break up ಆಗಿ ರುಕ್ಮಿಣಿ ಮದುವೆ ಆಗಲಿಲ್ಲವೆ ,ಅವಳಲ್ಲಿ ರಾಧೆ ಕಾಣಲಿಲ್ಲವೆ?
ಕೊನೆಯ ಇಳಿಯುವ station ಬರುತ್ತಾ ಇತ್ತು.
thank u for ur valuable
suggestion really i liked that ...today u saved my life ಎಂದಳು
ಕೈಕುಲುಕುತ್ತ
.ಮನುಷ್ಯ ಇನ್ನೋಂದು ಮನುಷ್ಯನ ಸಹಾಯಕ್ಕೆ ಬರದಿದ್ದರೆ ಯೆನು ಪ್ರಯೋಜನ ಅಯ್ತು. ಬಾಯ್ ಹೇಳುತ್ತಾ
ನಿಂತ ರೈಲಿನಿಂದಿಳಿದು ಜನರ ಮದ್ಯೆ ಮರೆಯಾದೆ.
ದಿನವು ಯಾರ್ ಯಾರೋ ಸಿಗುತ್ತಾರೆ
, ಮಾಯವಾಗುತ್ತಾರೆ , ನೆನಪಾಗುತ್ತಾರೆ , ಮರೆಯುತ್ತೆವೆ , ಮಾತನಾಡುತ್ತಾರೆ, ಮೌನಿಗಳಾಗುತ್ತಾರೆ ಇದೆಲ್ಲ ಕಾಮನ ಬಿಲ್ಲಿನ ಹಾಗೆ ಸ್ವಲ್ಪಸಮಯ ಬಂದು ಮಾಯವಾಗುವುದು
ಕಾಲಗಭ೯ದಲಿ ಎಲ್ಲವೂ ಶೂನ್ಯ.....